ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಮೂಡುಬಿದಿರೆ ಸಮಾಜ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೂಡುಬಿದಿರೆಯ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊ ನೇತೃತ್ವದಲ್ಲಿ ನಡೆದ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2025 ಸ್ಪರ್ಧೆಯಲ್ಲಿ `ಕರಾವಳಿ ಮಿಸ್ಟರ್ ಟೀನ್ 2025′ ವಿನ್ನರ್ ಆಗಿ ಸಾನ್ವಿತ್ ಕುಲಾಲ್ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಸಾನ್ವಿತ್ ಕುಲಾಲ್ ಅವರು ಕಿನ್ನಿಗೋಳಿಯ ಸೇಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಮೂಡಬಿದ್ರೆ ಕೋಟೆಬಾಗಿಲು ದಿ. ಸತೀಶ್ ಕುಲಾಲ್ ಮತ್ತು ಪವಿತ್ರಾ ಕುಲಾಲ್ ದಂಪತಿಯ ಸುಪುತ್ರ. ಸಾನ್ವಿತ್ ಕುಲಾಲ್ ಅವರು ಗಂಡುಕಲೆ ಯಕ್ಷಗಾನ, ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ ಕುಣಿತ ಅಲ್ಲದೆ ಸಿನಿಮಾ ನೃತ್ಯ ಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಮೂವತ್ತಕ್ಕೂ ಅಧಿಕ ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ.


