ಬೆಂಗಳೂರು : ಕುಂಬಾರರ ಮಹಾಸಂಘದ ರಾಜ್ಯಾಧ್ಯರಾಗಿ ಶಿವಕುಮಾರ್ ಚೌಡಶೆಟ್ಟಿ ಅವರು ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನ ಉತ್ತರಹಳ್ಳಿ ರಸ್ತೆಯ ಲಕ್ಷ್ಮೀ ವಲ್ಲಭ ಕಲ್ಯಾಣ ಮಂಟಪದಲ್ಲಿ ಜರುಗಿದ ಕರ್ನಾಟಕ ರಾಜ್ಯಕುಂಬಾರರ ಮಹಾಸಂಘದ ಸದಸ್ಯರ ತ್ರೈ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಮತ್ತೊಂದು ಅವಧಿಗೆ ರಾಜ್ಯಾಧ್ಯರಾಗಿ ಆಯ್ಕೆ ಮಾಡಲಾಯಿತು.
ತಮ್ಮನ್ನು ಆಯ್ಕೆಗೊಳಿಸಿದ ಸರ್ವ ಸದಸ್ಯರನ್ನುದ್ದೇಶಿಸಿ ಕೃತಜ್ಞತಾ ಭಾಷಣ ಮಾಡಿದ ಚೌಡಶೆಟ್ಟಿ ಅವರು “2010ರಲ್ಲಿ ಸಂಘಟನೆಯಲ್ಲಿ ಪ್ರಥಮ ಬಾರಿಗೆ ತೊಡಗಿಸಿಕೊಂಡೆ. ಆ ಸಂದರ್ಭ ಸಂಘಟನೆಯ ಬಗ್ಗೆ ಯಾವುದೇ ಅನುಭವ ಇರಲಿಲ್ಲ. ಆಗ ಧಾರ್ಮಿಕವಾಗಿ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಮುಖಾಂತರ ಗುರುಪೀಟ ಸ್ಥಾಪನೆ ಕುರಿತು ಚಿಂತನೆ ಮಾಡಿ ಕಾರ್ಯಪ್ರವೃತ್ತರಾದೆವು. ಕಾರಣಾಂತರದಿ೦ದ ಆ ಕನಸು ಈಡೇರಲಿಲ್ಲ. ಆ ಬಳಿಕ ೨೦೧೦ರಲ್ಲಿ ಮಹಾಸಂಘ ಸ್ಥಾಪನೆ ಕುರಿತು ಯೋಚಿಸಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ ಸಂಘಟನೆ ಮಾಡಲಾಯಿತು. ಬಳಿಕ ಬೆಂಗಳೂರಿನ ಪುರಭವನದಲ್ಲಿ ಕುಂಬಾರರ ಸಮಾವೇಶವನ್ನು ಹಮ್ಮಿಕೊಂಡ ಫಲವಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಘಕ್ಕೆ ನಿವೇಶನ ಹಾಗೂ ೧ ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದರು’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ ಎರಡು ವರ್ಷದ ಹಿಂದೆ ನಮ್ಮ ಸಮಾಜದ ಕೆಲ ಬಂಧುಗಳು ಹಾಗೂ ಸಂಘದ ನಿವೇಶನದ ಆಸುಪಾಸಿನ ನಿವಾಸಿಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ ಸಂಘದ ಕಟ್ಟಡದ ಕಾಮಗಾರಿಗೆ ತೊಡಕಾಗಿತ್ತು. ಇದೀಗ ದೇವರ ಕೃಪೆಯಿಂದ ಕೇಸು ಸಂಘದ ಪರವಾಗಿ ಬಂದಿದ್ದು, ಹೊಸ ಆಡಳಿತ ಮಂಡಳಿ ಜತೆಗೂಡಿ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು” ಎಂದರು.
ಬೆಂಗಳೂರು ಕುಂಬಾರರ ಸಂಘದ ಸ್ಥಾಪಕ ನಿರ್ದೇಶಕ ಕೆ. ಎಂ ದಕ್ಷಿಣಾಮೂರ್ತಿ, ಕುಂಬಾರ ಮುಖಂಡರಾದ ಡಿ. ವಿ. ಆರ್ ಸ್ವಾಮಿ, ಅಣ್ಣಯ್ಯ ಕುಲಾಲ್, ನಿಂಗರಾಜು, ಬಸಣ್ಣ ಕುಂಬಾರ ನಡಹಳ್ಳಿ, ಚಂದ್ರಶೇಖರ್ , ಮುತ್ತಮ್ಮ, ಹುಚ್ಚೇಶ್ ಕುಂಬಾರ ಮುಂತಾದ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಮಾತನಾಡಿದರು.
ತೇಜಸ್ವೀರಾಜ್, ಸಿ.ಎಂ.ಮರಿಯಪ್ಪ , ರಂಗ ಸೆಟ್ಟಿ ಹಾಸನ, ರಾಮಣ್ಣ ಉಡುಪಿ, ಪದ್ಮ ಕುಮಾರ್ ಬೆಳ್ತಂಗಡಿ, ಮುತ್ತಮ್ಮ ಮಡಿಕೇರಿ, ಬಾಬುರಾವ್ ಕುಂಬಾರ ಬೀದರ್, ಶೇಕರಪ್ಪ ಯಾದಗಿರಿ, ರೇಖಾ ಕುಂಬಾರ ಗುಲ್ಬರ್ಗ, ಹುಲಗಪ್ಪ ,ರಾಮಸ್ವಾಮಿ ಬಳ್ಳಾರಿ, ತಿಪ್ಪೇ ಸ್ವಾಮಿ, ಲಿಂಗರಾಜು ಚಿತ್ರದುರ್ಗ, ತುಳಸೀ ದಾಸ್ ಕಾರವಾರ, ಶಶಿಕಲಾ ಶಿವಕುಮಾರ್, ಸದಾನಂದ ಬೆಂಗಳೂರು, ಕುಂಬೋದಯ ಸೋಮಶೇಖರ್ ಮುಂತಾದ ರಾಜ್ಯದ ನೂರಾರು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.