ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಮುರುಕು ಮನೆಯಲ್ಲಿ ಅಸಹಾಯಕರಂತೆ ಬದುಕು ಸವೆಸುತ್ತಿದ್ದ ಮೂವರು ಅನಾಥರ ಕುಟುಂಬಕ್ಕೆ `ಕುಲಾಲ ವರ್ಲ್ಡ್ ‘ ವಾಟ್ಸಾಪ್ ಬಳಗದ ಮಿತ್ರರಿಂದ ಸಂಗ್ರಹಿಸಲ್ಪಟ್ಟ ಎರಡು ಲಕ್ಷ ರೂಪಾಯಿ ನೆರವನ್ನು ಸಂತ್ರಸ್ತ ಕುಟುಂಬಕ್ಕೆ ಜ.16 ರಂದು ಚೆಕ್ ಮೂಲಕ ಹಸ್ತಾಂತರಿಸಲಾಯಿತು.

ಬಜಪೆ ಸಮೀಪದ ಕೊಳಂಬೆ ಬೈಲು ಬೀಡು ಎಂಬಲ್ಲಿ ವಾಸವಿರುವ ದಿ. ತಿಮ್ಮಪ್ಪ ಮೂಲ್ಯ-ಹೊನ್ನಮ್ಮ ಎಂಬವರ ಮಕ್ಕಳಾದ ವೆಂಕಮ್ಮ(49), ಜಾನಕಿ (44) ಹಾಗೂ ತುಕಾರಾಮ (42) ಎಂಬವರ ಶೋಚನೀಯ ಬದುಕಿನ ಕಥೆಯನ್ನು `ಕುಲಾಲ ವರ್ಲ್ಡ್ ಡಾಟ್ ಕಾಮ್’ ಪ್ರಕಟಿಸಿ, ಇವರಿಗೆ ಹೊಸ ಮನೆ ನಿರ್ಮಿಸಲು ಆರ್ಥಿಕ ಸಹಾಯ ನೀಡುವಂತೆ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಗ್ರೂಪಿನ ಮುಖಾಂತರ ಮಾಡಲಾದ ವಿನಂತಿಗೆ ಅನೇಕ ಸಹೃದಯಿ ದಾನಿಗಳು ಸ್ಪಂದಿಸಿದ್ದರು. ಹೀಗೆ ಸಂಗ್ರಹಿಸಲಾದ ಒಟ್ಟು ಮೊತ್ತ 2 ಲಕ್ಷ ರೂ. ಹಣವನ್ನು ಮನೆ ನಿರ್ಮಾಣದ ಕಾಂಟ್ರಾಕ್ಟುದಾರರಾದ ಮಳಲಿ ತೆಂಕುಲ್ಪಾಡಿ ಪದ್ಮನಾಭ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ `ಕುಲಾಲ ವರ್ಲ್ಡ್ ಡಾಟ್ ಕಾಮ್’ ಹಾಗೂ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಗ್ರೂಪ್ ನ ಸಂಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು, ಹಣ ಸಂಗ್ರಹದ ಜವಾಬ್ದಾರಿ ವಹಿಸಿದ್ದ ಗ್ರೂಪ್ ನಿರ್ವಾಹಕ ಹೇಮಂತ್ ಕುಮಾರ್ ಕಿನ್ನಿಗೋಳಿ, ಕುಲಾಲ್ ವರ್ಲ್ಡ್ ಮಹಿಳಾ ವಿಭಾಗದ ಪ್ರಮುಖರಾದ ದಯಾ ಬಂಗೇರ, ಸದಸ್ಯರಾದ ಕಿರಣ್ ಕುಮಾರ್ ಮರಕಡ, ಸುಧಾಕರ್ ಕುಲಾಲ್ ಕೊಳಂಬೆ ಉಪಸ್ಥಿತರಿದ್ದರು.

“ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗ ನಡೆಸಿದ್ದ ಸಹಾಯಧನ ಸಂಗ್ರಹಣಾ ಅಭಿಯಾನಕ್ಕೆ ಉದಾರವಾಗಿ ದೇಣಿಗೆ ನೀಡಿರುವ ದಾನಿಗಳ ವಿವರ:
01. ವಿನೋದ್ ರಾಜ್ ಕೆ. ಎಮ್, ಮಂಜೇಶ್ವರ: 1000
02. ಪುಷ್ಪರಾಜ್ ಕುಲಾಲ್, ಮದ್ಯ ಸುರತ್ಕಲ್: 3000
03.ರಾಬಿನ್ ಜೋಸೆಫ್, ಬೆಹರೈನ್: 3192
04. ಅಶ್ವಥ್ ರೈ, ಸೌದಿ ಅರೇಬಿಯಾ: 1000
05. ಮುಖೇಶ್ ಕುಲಾಲ್, ಸೌದಿ ಅರೇಬಿಯಾ: 2000
06. ದಿಲ್ರಾಜ್ ಡಾನ್, ರೋಡ್ರಿಗಸ್, ಯು ಎಸ್ ಎ: 10,000
07. ಪ್ರವೀಣ್ ಕುಮಾರ್ ಶೆಟ್ಟಿ, ಬಜ್ಪೆ: 5000
08. ಮೋಹನ್ ಕುಲಾಲ್, ಇರ್ವತ್ತೂರು: 1000
09. ಶಂಕರ್ ಕುಂಜತ್ತೂರು: 1000
10. ತಾರನಾಥ್ ಜಯರಾಮ್: 5000
11. ಸುಧೀರ್ ಕುಲಾಲ್, ದೇರಳಕಟ್ಟೆ: 500
12. ಯತೀಶ್ ಕುಮಾರ್ ಎನ್ : 500
13. ರಾಜು ಮೂಲ್ಯ: 250
14. ಸಂಜೀವ ಕುಲಾಲ್ ಮಂಗಳೂರು: 1250
15. ಕುಲಾಲ್ಸ್ ದೋಹ ಕತರ್: 25,000
16. ಪ್ರವೀಣ್ ಪೀಟರ್, ಸೌದಿ ಅರೇಬಿಯಾ: 5180
17. ನಾರಾಯಣ್ ಸಿ ಪೆರ್ನೆ: 500
18. ದಿತೇಶ್ ಕುಮಾರ್: 100
19. ವಿಶಾಖ ಮಂಗಳೂರು: 100
20. ಅರುಣ್ ಕುಮಾರ್, ನೀಲೇಶ್ವರ: 1000
21. ನಿಶಾಂತ್ ಮರ್ಟೀನ್ ರೋಚ್, ಕತಾರ್: 10000
22. ಸತೀಶ್ ಬಂಜನ್: 200
23.ಸುರೇಶ್ ಮೂಲ್ಯ, ರಂಗನಪಲ್ಕೆ: 500
24. ಪ್ರಶಾಂತ್ ಬಂಗೇರ, ಇರ್ವತ್ತೂರು: 500
25. ಶ್ವೇತಾ ಕುಲಾಲ್, ಸುರತ್ಕಲ್: 500
26. ಗಂಗಾಧರ್ ಬಂಜನ್, ಕುಳಾಯಿ: 2000
27. ಸಿ.ಎಮ್ ಕುಲಾಲ್: 1000
28. ಮಮತಾ ಕುಲಾಲ್, ಕುಂಬ್ಳೆ: 500
29. ದೀಕ್ಷೀತ್ ಕೆ. ಎಚ್: 1000
30. ಶಿವಪ್ರಸಾದ್: 1000
31. ಬೆಹರೈನ್ ದೋಸ್ತಿಲು: 5500
32. ದಯಾಲಕ್ಷ್ಮೀ ಎಸ್ ಬಂಗೇರ, ಮಂಗಳೂರು:15,000
33. ಚಂದ್ರಶೇಖರ್ ಎನ್ ಕುಲಾಲ್: 500
34. ಹರ್ಷಲತಾ ತೊಕ್ಕೊಟ್ಟು: 1000
35. ಸುಲೋಚನ ಕೆ: 2500
36. ಧೀರಾಜ್ ಕುಲಾಲ್, ಬಂಟ್ವಾಳ: 500
37. ಉದಯ್ ಕುಮಾರ್, ತೋಕೂರು: 500
38. ಸಂತೋಷ್ ಮೂಲ್ಯ: 200
39. ಸಾವಿತ್ರಿ ಕೊಡಿಯಲಬೈಲ್: 10,006
40. ದಿವಾಕರ್ ಎನ್ ಕುಲಾಲ್, ಸೌದಿ ಅರೇಬಿಯಾ : 1000
41. ಕಿರಣ್ ಕುಮಾರ್, ಮರಕಡ: 5000
42. ಕಿರಣ್ ಬಜಲ್: 1000
43. ಆನಂದ್ ಕುಂಬಾರ, ಕತಾರ್: 5000
44. ಬ್ರಯನ್ ಡಿಸಿಲ್ವಾ ಒಮಾನ್: 5000
45. ಎಸ್.ಕೆ ಎಜೆನ್ಸಿ: 500
46. ಸೌಮ್ಯ ಕುಮಾರಿ: 100
47. ಧನವಂತ ಕುಮಾರ್: 1000
48. ಅವಿನಾಶ್ ಕುಲಾಲ್: 1000
49. ದಿನೇಶ್ ಬಂಗೇರ, ಇರ್ವತ್ತೂರು: 4000
50. ಕಮಲಾಕ್ಷ ಬಂಗೇರ, ತೋಕೂರು: 500
51. ಸತೀಶ್ ಬಂಗೇರ, ಕತಾರ್: 5000
52. ಸಂದೇಶ್ ಪುತ್ತೂರು: 500
53. ರಶ್ಮಿ ಪ್ರಶಾಂತ್ ಮೂಲ್ಯ, ಕಳತ್ತೂರು: 1000
54. ಕೃಷ್ಣ ಮೂಲ್ಯ: 100
55. ಅನಿಲ್ ಬಂಗೇರ, ಸುರತ್ಕಲ್: 2000
56. ಜಯಶೀಲಾ ಬಂಗೇರ: 2500
57. ನಾರಾಯಣ ಮೂಲ್ಯ: 1000
58. ಉಮಶಂಕರ: 500
59. ನಾಗರಾಜ್ ಕುಲಾಲ್: 1000
60. ಸಂತೋಷ್ ಕುಲಾಲ್, ತಲಪಾಡಿ: 500
61. ಸತೀಶ್ ಮೂಲ್ಯ, ಇನ್ನಾ: 500
62. ಪವನ್ ಕುಲಾಲ್, ಕುವೈತ್: 1000
63. ಪ್ರೀತಿ: 280
64. ಪ್ರಶಾಂತ್ ಗುರುವಾಯನಕೆರೆ: 200
65. ಸಂತೋಷ್ ಕುಮಾರ್, ಸೌದಿ: 1110
66. ಸಿ.ಎಸ್: 500
67. ಸತೀಶ್ ಬಂಗೇರ, ಇರ್ವತ್ತೂರು: 1000
68. ಗಿರಿಜ: 572
69. ಯೋಗಾನಂದ ಕಿನ್ನಿಗೋಳಿ: 1110
70. ನಾರಾಯಣ್ ಸಾಲ್ಯಾನ್, ಕುಂಜತ್ ಬೈಲ್:1000
71. ರಿತೇಶ್ ಕುಲಾಲ್, ಓಮಾನ್: 1000
72. ಜಯಲಕ್ಷ್ಮೀ ಕುಲಾಲ್, ಮೇರಿಹಿಲ್: 1000
73. ಸಂತೋಷ್ ಕುಲಾಲ್ ಮೈಸೂರು: 2000
74. ಮಿನೇಶ್ ಸಿ, ಯುಎಸ್ಎ: 1500
75. ಶಿವರಾಮ್ ಮೂಲ್ಯ, ಮುಂಬಯಿ: 1001
76. ರಾಜೇಶ್ ಕುಲಾಲ್, ದುಬೈ: 2000
77. ದಿಲೀಪ್ ಬಂಗೇರ: 500
78. ನೇಸರ ಮೂಡುಬಿದಿರೆ: 500
79. ಶರತ್ ಬೆಹರೈನ್: 6000
80. ನೀಲಕಂಠ ಭಟ್, ಉಜಿರೆ : 5000
81. ಅಮಿತ್ ಜಾನ್, ಯು.ಎಸ್.ಎ: 5000
82. ಶಂಕರ್ ಶೆಟ್ಟಿ, ದುಬೈ: 5000
83. ಸುಪ್ರೀಯಾ ಕೆ: 500
84. ತಿಮ್ಮಪ್ಪ ಮೂಲ್ಯ, ಬೆಳ್ತಂಗಡಿ: 1008
85. ರಮೇಶ್ ಕುಮಾರ್, ವಗ್ಗ: 500
86. ಹೃದಯ್ ಕುಲಾಲ್, ಕಾರ್ಕಳ: 500
87. ಹರೀಶ್ ಕುಮಾರ್ ಜೋಗಿ: 500
88. ಎಚ್ ಕೆ ಕಿನ್ನಿಗೋಳಿ: 2000
ಸಂಗ್ರಹವಾದ ಒಟ್ಟು ಮೊತ್ತ: 2,00,462/-
- ಮುರುಕು ಮನೆಯಲ್ಲಿ ಅಸಹಾಯಕರಂತೆ ಬದುಕು ಸವೆಸುತ್ತಿರುವ ಬಜಪೆ ಸಮೀಪದ ಕೊಳಂಬೆ ಬೈಲು ಬೀಡು ಎಂಬಲ್ಲಿ ವಾಸವಿರುವ ದಿ. ತಿಮ್ಮಪ್ಪ ಮೂಲ್ಯ-ಹೊನ್ನಮ್ಮ ಎಂಬವರ ಮಕ್ಕಳಾದ ವೆಂಕಮ್ಮ(49), ಜಾನಕಿ (44) ಹಾಗೂ ತುಕಾರಾಮ (42) ಇವರ ಮನೆ ನಿರ್ಮಾಣದ ಕಾಮಗಾರಿಗೆ ಸುಮಾರು ಮೂರುವರೆ ಲಕ್ಷ ರೂಪಾಯಿ ಅಗತ್ಯವಿದೆ. ಇವರ ಮನೆ ನಿರ್ಮಾಣದ ಗುತ್ತಿಗೆದಾರರಾದ ಮಳಲಿ ತೆಂಕುಲ್ಪಾಡಿ ಪದ್ಮನಾಭ ಅವರ ಪ್ರಕಾರ ಕೇವಲ ಇನ್ನುಳಿದ ಗೋಡೆ ಮತ್ತು ಆರ್ ಸಿಸಿ ಸ್ಲಾಬ್ ನಿರ್ಮಾಣಕ್ಕೆ ಅಂದಾಜು 2.30 ಲಕ್ಷ ರೂ. ವೆಚ್ಚವಾಗಲಿದೆ. ಪ್ರಸ್ತುತ `ಕುಲಾಲ್ ವರ್ಲ್ಡ್’ ಮೂಲಕ ಸಂಗ್ರಹಗೊಂಡ ಎರಡು ಲಕ್ಷ ರೂ. ನೀಡಲಾಗಿದ್ದು, ಸದ್ಯವೇ ಆರ್ ಸಿಸಿ ಸ್ಲಾಬ್ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತಿದೆ. ಮನೆಯ ಉಳಿದ ಕಾಮಗಾರಿಗಾಗಿ ಹಣದ ಅವಶ್ಯಕತೆ ಇದ್ದು, ನಮ್ಮ ನಡುವೆ ಇರುವ ಉದಾರ ದಾನಿಗಳ ನೆರವನ್ನು ನಿರೀಕ್ಷಿಸಲಾಗುತ್ತಿದೆ. ಮಾನವೀಯ ನೆಲೆಯಲ್ಲಿ ಈ ಕುಟುಂಬದ ಮನೆಯ ನಿರ್ಮಾಣಕ್ಕೆ ಕೈ ಜೋಡಿಸಲು ಬಯಸುವವರು ಸುಧಾಕರ್ ಕೊಳಂಬೆ :98453 78949 ಅಥವಾ ಹೇಮಂತ್ ಕಿನ್ನಿಗೋಳಿ : 94809 22412 ಇವರನ್ನು ಸಂಪರ್ಕಿಸಲು ವಿನಂತಿಸಲಾಗಿದೆ
