ಮಂಗಳೂರು: ವಿಶ್ವವಿಕಲಚೇತನರ ಕಲ್ಯಾಣಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳು, ವಿಶೇಷ ವ್ಯಕ್ತಿಗಳು, ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲಿಕರಣ ಇಲಾಖೆಯು ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಮಂಗಳೂರಿನ ಹರಿಣಾಕ್ಷಿ ಕುಲಾಲ್ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಶ್ವ ವಿಕಲಚೇತನರ ದಿನದ ಅಂಗವಾಗಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ವಿಕಲಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರನ್ನು ಗುರುತಿಸಿ ತಲಾ 15 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತಿದ್ದು, ಅಂಧ ಶಿಕ್ಷಕಿ ಎಕ್ಕೂರಿನ ಹರಿಣಾಕ್ಷಿ ಕುಲಾಲ್ ಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಂಗೀತ, ಕರಕುಶಲ ಕಲೆ, ಭರತನಾಟ್ಯದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಹರಿಣಾಕ್ಷಿ ಅವರು ಪ್ರಸ್ತುತ ವಾಮಂಜೂರಿನ ಮಂಗಳಜ್ಯೋತಿ ಶಾಲೆಯಲ್ಲಿ ಕ್ರಾಫ್ಟ್ ಶಿಕ್ಷಕಿಯಾಗಿದ್ದಾರೆ.
ಮಂಜುನಾಥ ದುಸಂಗಪ್ಪ ಹದ್ದಣ್ಣವರ ಗದಗ, ನಿಂಗಪ್ಪ ಬ ಹೋಗಾರ ಬೆಳಗಾವಿ, ಸುಶೀಲ ಮೈಸೂರು ಹಾಗೂ ಬೆಂಗಳೂರಿನ ಎಸ್ ಮಂಜುಳಾ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಇತರರು.
(ಮಹಿಳಾ ವಿಭಾಗದಲ್ಲಿ (Womens Corner) `ಹರಿಣಾಕ್ಷಿ ಕುಲಾಲ್ ಸಾಧನೆಗೆ ಅಡ್ಡಿಯಾಗದ ಅಂಧತ್ವ’ ಲೇಖನ ಇದೆ ಓದಿರಿ. ಕಣ್ಣು ಕಾಣಿಸದ ಹರಿಣಾಕ್ಷಿ ಕುಲಾಲ್ ಅವರ ಮೊಬೈಲ್ ಸಂಖ್ಯೆ 9902208389 ಗೆ ಕರೆ ಮಾಡಿ ಶುಭಾಶಯ ಕೋರಲು ಮರೆಯಬೇಡಿ )