ಮೂಡಿಗೆರೆ(ಕುಲಾಲ ವರ್ಲ್ಡ್ ಡಾಟ್ ಕಾಮ್): ನಮ್ಮ ಸಮುದಾಯ ಸಂಘಟಿತರಾಗುವ ಜತೆಗೆ ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಚಿತ್ರದುರ್ಗದ ಕುಂಬಾರ ಗುರುಪೀಠದ ಶ್ರೀ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ಏರ್ಪಡಿಸಿದ್ದ ಕುಂಬಾರ ಯಾನೆ ಕುಲಾಲ ಸಂಘದ 2ನೇ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಶ್ರೀ ಸತ್ಯ ನಾರಾಯಣಸ್ವಮಿ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ನಮ್ಮ ಸಮುದಾಯಕ್ಕೆ ಮೀಸಲಾತಿ ಮೂಲಕ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಹಾಗೂ ನಿಗಮ ಸ್ಥಾಪಿಸಲು ಸರಕಾರಕ್ಕೆ ಒತ್ತಡ ಹಾಕಲು ಸಮುದಾಯದ ಜನರು ರಾಜ್ಯಾಧ್ಯಂತ ಸಂಘಟಿತರಾಗಬೇಕು. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಪರಿಹರಿಸಿಕೋಳ್ಳಬೇಕು. ಸಂಘಟಿತರಾಗಲು ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಲು ಶ್ರಮಿಸಬೇಕೆಂದು ಹೇಳಿದರು.

ಕರ್ನಾಟಕ ಸರಕಾರದ ಪಠ್ಯ ಪುಸ್ತಕ ರಚನಾ ಸಮಿತಿ ಮುಖ್ಯಸ್ಥ ಆರ್.ಡಿ.ರವೀದ್ರ ಮಾತನಾಡಿ, ಹುಟ್ಟು ಸಾಮಾನ್ಯ ಆಗಿರಬಹದು. ಆದರೆ ಸಾವು ಸಾಮಾನ್ಯವಾಗಬಾರದು. ಪ್ರತಿಭೆಗಳು ಅನಾವರಣಗೊಳ್ಳದೇ ಎಲೆಮರೆಕಾಯಿಯಾಗಿದ್ದ ಸಮುದಾಯದ ಅನೇಕ ಸಾಧಕರು ಗುರುತಿಸಿ ಪ್ರೋತ್ಸಾಹ ನೀಡಬೇಕು. ಪ್ರಾಮುಖ್ಯತೆ ಕೊಡುವ ವಿಚಾರಗಳ ಬಗ್ಗೆ ಗಮನಹರಿಸಬೇಕು. ಮಕ್ಕಳ ಜೀವನ, ಭವಿಷ್ಯ ರೂಪಿಸುವ ಜತೆಗೆ ಸಂಬಂಧದ ಮೌಲ್ಯಗಳನ್ನು ಮಕ್ಕಳಿಗೆ ಅರಿವು ಮೂಡಿಸಬೇಕು. ಜೀವನ ಎಂದರೆ ಶೇ.100 ಅಂಕ ಪಡೆಯುವುದು ಮಾತ್ರವಲ್ಲ. ಜೀವನದ ಪಾಠದಲ್ಲಿ ಶೇ.100 ಅಂಕ ಗಳಿಸುವಂತಾಗಬೇಕು. ಸೋಲಿಗೆ ಕಾರಣ ಹುಡುಕಿದಾಗ ಮಾತ್ರ ಗೆಲುವಿನ ದಾರಿ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಭಗವದ್ ಗೀತೆ ಪುಸ್ತಕ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಗುವುದು.ಸುಕ್ಷೇತ್ರ ತೋಳೂರು ಶ್ರೀ ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಧರ್ಮೇಶ್, ಹಡ್ಲುಗದ್ದೆ ವನದುರ್ಗ ಪರಮೇಶ್ವರಿ ಅಮ್ಮನವರ ಕ್ಷೇತ್ರದ ಚಿದಾನಂದ ಗುರೂಜಿ ಮಾತನಾಡಿದರು. ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಜಲ್ಲಾಧ್ಯಕ್ಷ ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಟಿ.ಹರೀಶ್ ವಹಿಸಿದ್ದರು.

ಸಂಘದ ನಾಗರಾಜ್, ಸುರೇಶ್, ಮಂಜುನಾಥ್, ಚಂದ್ರಶೇಖರ್ ಶೃಂಗೇರಿ, ಶಿವಮೂರ್ತಿ ಕೊಪ್ಪ, ಮಂಜಪ್ಪಶೆಟ್ಟಿ ಎನ್.ಆರ್.ಪುರ, ಸೋಮಶೇಖರ್ ಕಡೂರು, ಬಾಬು ಕಳಸ, ಚಂದ್ರಶೇಖರ್ ಸಕಲೇಶಪುರ, ಸುಜಯ ಕಳಸ ಸೇರಿದಂತೆ ಸಂಘದ ಪದಾಧಿಕಾರಿಗಳು ನಿರ್ದೇಶಕರು ಉಪಸ್ಥಿತರಿದ್ದರು.
