ಸಂಘಟನಾತ್ಮಕವಾಗಿ ಮುಂದುವರಿದಾಗ ಮಾತ್ರ ಸದೃಢ ಸಮಾಜ : ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ
ಕುಂದಾಪುರ(ಕುಲಾಲ ವರ್ಲ್ಡ್ ಡಾಟ್ ಕಾಮ್): ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜವು ಸಂಘಟನಾತ್ಮಕವಾಗಿ ಮುಂದುವರಿದಾಗ ಮಾತ್ರ ಸದೃಢ ಸಮಾಜಕ್ಕೆ ಸಹಕಾರಿಯಾಗಬಲ್ಲದು. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರು ಹೇಳಿದರು.
ಡಿ.22ರಂದು ಬಿಟ್ಕಲ್ಕಟ್ಟೆ ಕಾಲೇಜು ಮೈದಾನದಲ್ಲಿ ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮಂಗಳೂರು ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಘಟಕಗಳ ಸಾರಥ್ಯದಲ್ಲಿ ಕುಲಾಲ ಕ್ರೀಡೋತ್ಸವ-2024, ಕುಂಭ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಲಾಲ ಕ್ರೀಡೋತ್ಸವ ಸಮಿತಿಯ ಅಧ್ಯಕ್ಷ ರಾಘವೇಂದ್ರ ಕುಲಾಲ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇದರ ಪ್ರವರ್ತಕ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು, ಗ್ರಾ.ಪಂ. ಮೊಳಹಳ್ಳಿ ಇದರ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ದ್ಯಾವಲಬೆಟ್ಟು, ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಹೊಂಬಾಡಿ ಇದರ ಅಧ್ಯಕ್ಷ ಬಿದ್ಕಲ್ಕಟ್ಟೆ ವಿಶ್ವನಾಥ ಕುಲಾಲ್, ಮಹಿಳಾ ಘಟಕ ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ, ಹೊಂಬಾಡಿ ಇದರ ಅಧ್ಯಕ್ಷೆ ಅನಿತಾ ಅಶೋಕ ಕುಲಾಲ ನೂಜಿ, ವಿಜಯ ವಿಟ್ಠಲ ಕೆಮಿಕಲ್ ಪೈ. ಲಿಮಿಟೆಡ್ ಬೆಂಗಳೂರು ಇದರ ಮೆನೇಜಿಂಗ್ ಡೈರೆಕ್ಟರ್ ಕೆ.ಲಕ್ಷ್ಮಣ ಕುಲಾಲ ಜನ್ಸಾಲೆ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಪಿಡಿಒ ತೇಜಪ್ಪ ಕುಲಾಲ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಕುಲಾಲ ಜನ್ಸಾಲೆ, ಭೋಜ ಕುಲಾಲ ಬೇಳಂಜೆ, ಸುರೇಂದ್ರ ಕುಲಾಲ, ದಿವಾಕರ ಬಂಗೇರ ಕಾರ್ಕಳ, ಶಂಕರ ಕುಲಾಲ ಮೊಳಹಳ್ಳಿ, ದಿನೇಶ್ ಕುಲಾಲ ಜನ್ಸಾಲೆ, ಶಂಕರ ಕುಲಾಲ ಹೆಬ್ಬಗೋಳಿ, ಚೇತನ್, ಸತೀಶ್ ಕುಲಾಲ ನೆಡೂರು ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಕುಲಾಲ ಹೆಮ್ಮಾಡಿ ಸ್ವಾಗತಿಸಿ, ರೇಖಾ ಪಿ.ಕುಲಾಲ, ಮಂಜುನಾಥ ಕುಲಾಲ ನಿರೂಪಿಸಿ, ದಿನೇಶ ಕುಲಾಲ್ ವಂದಿಸಿದರು.

ಇದೇ ಸಂದರ್ಭ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಹಾಗು ಮಹಿಳಾ ಸಂಘಟನೆ ರಿ. ಮಂಗಳೂರು. ಇದರ ಉಡುಪಿ ಜಿಲ್ಲಾ ಘಟಕದ ನಾಯಕರುಗಳ ಸಭೆ ಹಾಗು ಜಿಲ್ಲಾ ಅಧ್ಯಕ್ಷರ ಆಯ್ಕೆಯು ಸಂಘಟನೆಯ ಕೇಂದ್ರ ಸಮಿತಿ, ರಾಜ್ಯ ಸಮಿತಿ ಯ ಹಿರಿಯ ನಾಯಕರುಗಳ ಉಪಸ್ಥಿತಿ ಹಾಗೂ ವೀಕ್ಷಣೆ ಮತ್ತು ಮಾರ್ಗದರ್ಶನದಲ್ಲಿ ಜರುಗಿತು. ನೂತನ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆದ ಮಂಜುನಾಥ್ ಕುಲಾಲ್ ಜನ್ಸಾಲೆ ಹಾಗು ಪ್ರಧಾನ ಕಾರ್ಯದರ್ಶಿ ಶಂಕರ ಕುಲಾಲ್ ಮೊಳಹಳ್ಳಿ ಯವರಿಗೆ ನಿರ್ಗಮನ ಜಿಲ್ಲಾ ಅಧ್ಯಕ್ಷ ದಿವಾಕರ ಬಂಗೇರ ಸಂಸ್ಥೆಯ ದಾಖಲೆ ಮತ್ತು ನಡಾವಳಿಯನ್ನ ನೀಡಿ ಹಸ್ತಾಂತರಿಸಿದರು. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಆಯಾಯ ಯುವ ವೇದಿಕೆಗಳು ಆಯಾಯ ಮಾತೃ ಸಂಘಗಳ ಜೊತೆ ಜೊತೆಗೆ ಸಮುದಾಯದ ಸಂಘಟನೆ ಮಾಡಲು ತೀರ್ಮಾನ ಮಾಡಲಾಯಿತು. ಜಿಲ್ಲಾ ಘಟಕವನ್ನ ಬಲಿಷ್ಠವಾಗಿ ಕಟ್ಟಿ ಸಮಾಜದ ಒಳಿತಿಗಾಗಿ ದುಡಿಯಲು ಉಡುಪಿ ಜಿಲ್ಲೆಯ ಎಲ್ಲಾ ಮಾತೃ ಸಂಘಗಳ ಸಹಕಾರ ಪಡೆದು ಯುವ ವೇದಿಕೆ ಹಾಗು ಮಹಿಳಾ ಸಂಘಟನೆಯ ಮೂಲಕ ಇನ್ನಷ್ಟು ಸವಲತ್ತು ಗಳನ್ನ ಸರಕಾರದಿಂದ ಪಡೆದು ಮುನ್ನಡೆಯಲು ಇಡಿ ಸಭೆ ತೀರ್ಮಾನಿಸಲಾಯಿತು.
![]()
![]()


