
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭಾಯಂದರ್ ಸೈಂಟ್ ಫ್ರಾನ್ಸಿಸ್ ಹೈಸ್ಕೂಲಿನ ವಿದ್ಯಾರ್ಥಿ ರಿಷಿಲ್ ಪಿ ಉದ್ಯಾವರ ಅವರು 93% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಭಾಯಂದರ್ ಪೂರ್ವದ ನಿವಾಸಿ ಮೂಲತಃ ಸುರತ್ಕಲ್ ನ ಪುರುಷೋತ್ತಮ ಹಾಗೂ ಸುಲೋಚನಾ ದಂಪತಿಗಳ ಸುಪುತ್ರ.

