ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಇಲ್ಲಿನ ತಾಲೂಕು ಕುಲಾಲ ಸುಧಾರಕ ಸಂಘದ 44ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಭಾನುವಾರ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಉಪಾಧ್ಯಕ್ಷ ಜಯರಾಜ್ ಪ್ರಕಾಶ್ ಮಾತನಾಡಿ ಬಂಟ್ವಾಳ ತಾಲೂಕಿಗೆ ವಿಶೇಷ ಮಹತ್ವ ಇದ್ದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಲಾಲರು ಇದ್ದಾರೆ ಎಂದರು. ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಸ್ಥಾನಮಾನಗಳಿಗೆ ದೊಡ್ಡ ಹೋರಾಟಗಳು ನಡೆದಿಲ್ಲ, ಸಂಘಗಳ ಮಧ್ಯೆ ಹೊಂದಾಣಿಕೆಯೊಂದಿಗೆ ಎಲ್ಲರೂ ಒಟ್ಟಾಗಿ ಸಮುದಾಯದ ಅಭಿವದ್ಧಿಗೆ ಶ್ರಮಿಸಬೇಕು ಎಂದರು.
ಟ್ಟಡ ಸಮಿತಿ ಗೌರವಾಧ್ಯಕ್ಷ ಕೃಷ್ಣಪ್ಪ ಬಿ. ಅವರಿಗೆ ಕುಲಾಲ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಕೇಶವ ಮಾಸ್ತರ್, ಬೂಡ ಸದಸ್ಯ ಮನೋಹರ ನೇರಂಬೋಳು, ಆನಂದ ಮಿತ್ತ ಪರಾರಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ಆಹಾರ ಶಿರಸ್ತೇದಾರ್ ಎನ್. ಶ್ರೀನಿವಾಸ್, ಹರೀಶ್ ಮೂಲ್ಯ ಬಿಜೈ, ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ ಸೇವಾದಳಪತಿ ರಾಜೇಶ್ ರಾಯಿ ಉಪಸ್ಥಿತರಿದ್ದರು.
ಸತೀಶ್ ಕುಲಾಲ್ ಸ್ವಾಗತಿಸಿದರು, ಕೇಶವ ಮಾಸ್ತರ್ ವಾರ್ಷಿಕ ವರದಿ ವಾಚಿಸಿದರು. ಮೀನಾಕ್ಷಿ ಪದ್ಮನಾಭ, ಸುಕುಮಾರ್ ಬಂಟ್ವಾಳ ವಿಜೇತರ ಪಟ್ಟಿ ವಾಚಿಸಿದರು.
ಮಚ್ಚೇಂದ್ರ ಸಾಲ್ಯಾನ್ ಹಾಗೂ ದಾಮೋದರ ಏರ್ಯ ಸನ್ಮಾನಿತರ ಪತ್ರ ವಾಚಿಸಿದರು. ಈಶ್ವರ ಮಿತ್ತೂರು ಅನಿಸಿಕೆ ವ್ಯಕ್ತಪಡಿಸಿದರು. ನಾರಾಯಣ ಸಿ. ಪೆರ್ನೆ ವಂದಿಸಿದರು.
ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಮಹಾಸಭೆ: ಬೆಳಿಗ್ಗೆ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ 44ನೇ ವಾರ್ಷಿಕ ಮಹಾಸಭೆ ನಡೆಯಿತು. ಈ ಬಾರಿ ಚುನಾವಣೆಯ ಮೂಲಕ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಡಿ.ಆರ್. ಚುನಾವಣಾಧಿಕಾರಿಯಾಗಿ ಭಾಗವಹಿಸಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಚಿತ್ರ -ವರದಿ : ಸಂದೀಪ್ ಸಾಲ್ಯಾನ್ (aksharanews.in)