
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಸಿಬಿಎಸ್’ಇ 10ನೇ ತರಗತಿ ಪರೀಕ್ಷೆಯಲ್ಲಿ ಸುರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಶರಜ್ ಶ್ರೇಯಸ್ ಅವರು 96.6% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಕಾಟಿಪಳ್ಳ ಕೈಕಂಬದ ಗಣೇಶಪುರ ನಿವಾಸಿ ಸತೀಶ್ .ಆರ್ ಮತ್ತು ಲೀಲಾವತಿ ದಂಪತಿಯ ಸುಪುತ್ರ.