
ಬಂಟ್ವಾಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಪ್ರಾರ್ಥನಾ ಅವರು 97.12% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸಜಿಪ ಮುನ್ನೂರು ನಿವಾಸಿ ಜಯ ಕುಲಾಲ್ ಮತ್ತು ಚಂದ್ರಾವತಿ ದಂಪತಿಯ ಸುಪುತ್ರಿ.

