
ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ಪ್ರಕಟವಾದ ಎಂಬಿಬಿಎಸ್ ಅಂತಿಮ ವರ್ಷದ ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರು ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಚಾಂದಿನಿ ಅವರು 72% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕುಚ್ಚೂರು ಚಾರ ನಿವಾಸಿ ಗೋಪಾಲ ಕುಲಾಲ್ ಮತ್ತು ಗಿರಿಜಾ ದಂಪತಿಯ ಸುಪುತ್ರಿಯಾದ ಚಾಂದಿನಿ ಅವರಿಗೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಡಾ. ಅಣ್ಣಯ್ಯ ಕುಲಾಲ್ ಮಾರ್ಗದರ್ಶನ ನೀಡಿದ್ದರು. ಕಡುಬಡತನದವರಾದ ಚಾಂದಿನಿ ಅವರ ವೈದ್ಯಕೀಯ ಶಿಕ್ಷಣಕ್ಕಾಗಿ ಕುಂಭ ವೈದ್ಯಕೂಟ, ಕುಂಭ ಇಂಜಿನಿಯರ್ಸ್ ಸಂಘ, ಕುಂಬಾರ ಮಹಾಸಂಘ, ಕುಲಾಲ ಯುವವೇದಿಕೆ, ಸರಕಾರಿ ನೌಕರರ ಸಂಘ, ವೈದ್ಯ ಬರಹಗಾರರ ಬಳಗ ಮೊದಲಾದವರು ಆರ್ಥಿಕ ಸಹಾಯ ಮಾಡಿತ್ತು. ಹೆರ್ಗ ವಿಠಲ ಶೆಟ್ಟಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿಯಾಗಿರುವ ಚಾಂದಿನಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.95.5 ಅಂಕಗಳನ್ನು ಗಳಿಸಿದ್ದರು.

