ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಸುರತ್ಕಲ್ ಉಪಮಹಾನಗರ ಪಾಲಿಕಾ ವ್ಯಾಪ್ತಿಯ ವಾರ್ಡ್ ನಂ 4 UV ಕೃಷ್ಣಾಪುರ ಕಾಟಿಪಳ್ಳ 7 ನೇ ಬ್ಲಾಕ್ ನ ವಿಶ್ವನಾಥ ದೇವಸ್ಥಾನದ ಹತ್ತಿರ ವಯೋ ಸಹಜ ಮೃತಪಟ್ಟ ನಿರ್ಗತಿಕ ವಯೋವೃದ್ಧನ ಅಂತ್ಯ ಸಂಸ್ಕಾರವನ್ನು ಸ್ಥಳೀಯ ಕುಲಾಲ ಸಂಘಟನೆಗಳು ಸೇರಿ ಮಾಡಿದ ಸೇವೆಯ ಬಗ್ಗೆ ವರದಿಯಾಗಿದೆ.
ಮನೆಯಲ್ಲಿ ಮನೋರೋಗದ ಸಹೋದರಿ ಲಕ್ಷ್ಮೀ ಮೂಲ್ಯ ಅವರ ಜತೆ ವಾಸವಾಗಿದ್ದ ಈ ವಯೋವೃದ್ಧ ಅವಿವಾಹಿತ ಅಂದಾಜು ಪ್ರಾಯ 70 ವರ್ಷದ ಗೋಪಾಲ ಎಂದು ತಿಳಿಯಲಾಗಿದೆ.
ವಾಸವಾಗಿದ್ದ ಮನೆಯ ದಾಖಲೆ ಹಾಗು ಯಾವುದೇ ಇತರ ದಾಖಲೆಗಳು ಇವರ ಬಳಿ ಇರಲಿಲ್ಲ ಮತ್ತು ಬಂಧು ಬಳಗದವರ ಸಂಪರ್ಕವಿಲ್ಲದೆ ಅನಾಥರಾಗಿ ಜೀವಿಸುತ್ತಿದ್ದರು. ಈ ವಯೋವೃದ್ಧ ಮೃತಪಟ್ಟ ಸುದ್ದಿಕೇಳಿ ಸ್ಥಳೀಯರು ಹಾಗು ಸಂಘಟನೆಗಳು ಸ್ಥಳಕ್ಕೆ ಆಗಮಿಸಿ ಅಂತ್ಯಕ್ರಿಯೆ ಗೆ ಮುಂದಾದರು. ಸ್ಥಳೀಯ ಕಾರ್ಪೋರೇಟರ್ ಲಕ್ಷ್ಮೀ ಶೇಖರ್ ದೇವಾಡಿಗರವರು ಸ್ಥಳಕ್ಕೆ ಭೇಟಿ ನೀಡಿ ಅಂತ್ಯಕ್ರಿಯೆ ಗೆ ದಹನಕ್ಕೆ ಸಹಕಾರ ಮಾಡಿದರು.
ಈ ಸಂಧರ್ಭದಲ್ಲಿ ಕುಲಾಲ ಕುಂಬಾರ ರಾಜ್ಯ ಯುವವೇದಿಕೆಯ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್,ಕುಳಾಯಿ ಕುಲಾಲ್ ಸಂಘದ ಅಧ್ಯಕ್ಷ ಮೋಹನ ಐ ಮೂಲ್ಯ, ಕಾರ್ಯದರ್ಶಿ ಗಣೇಶ್ ಕುಲಾಲ್,ಕೃಷ್ಣಾಪುರ ಕುಲಾಲ್ ಸಂಘದ ಅಧ್ಯಕ್ಷ ಚಂದ್ರಹಾಸ ಕುಲಾಲ್, ಜತೆ ಕಾರ್ಯದರ್ಶಿ ಲತೀಶ್,ರಾಮಚಂದ್ರ ಕೆ ,, ಸತೀಶ್ ಸಾಲ್ಯಾನ್,ಕೃಷ್ಣಾಪುರದ ಜೈಹಿಂದ್ ಸಂಘಟನೆಯ ವಿಶ್ವನಾಥ ದೇವಾಡಿಗ, ದ್ವಾರ ಪ್ರೆಂಡ್ಸ್ ನ ಕೇಶವ ಪೂಜಾರಿ, ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಹೊನ್ನಯ್ಯ ಕಾಟಿಪಳ್ಳ, ಸ್ಥಳೀಯರಾದ ನಿಕ್ಲಾಬೋಸ್, ಶಶಿಕಲಾ , ಧನಪಾಲ್ ಮತ್ತಿತರರು ಉಪಸ್ಥಿತರಿದ್ದರು.
ಈ ಹಿಂದೆ ಮುರಿದು ಬೀಳುವ ಹಂತದಲ್ಲಿದ್ದ ಲಕ್ಷ್ಮೀ ಮೂಲ್ಯರ ಮನೆಯ ಬಗ್ಗೆ `ಮಂಗಳೂರು ನಗರದಲ್ಲೇ ಹಿರಿಜೀವಕ್ಕಿಲ್ಲ ಆಸರೆ ; ಬದುಕು ಕತ್ತಲೆ’ ಎಂಬ ಶಿರೋನಾಮೆಯಲ್ಲಿ `ಕುಲಾಲ ವರ್ಲ್ಡ್ ಡಾಟ್ ಕಾಮ್’ ವಿಸ್ತೃತ ವರದಿ ಪ್ರಕಟಿಸಿ ಗಮನಸೆಳೆದ ಪರಿಣಾಮ ಅವರಿಗೆ ಕುಲಾಲ ಸಂಘಟನೆಗಳು ಸೇರಿ ಸುಸಜ್ಜಿತ ಮನೆ ನಿರ್ಮಿಸಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.