ಸುಳ್ಯ(ಕುಲಾಲ ವರ್ಲ್ಡ್ ಡಾಟ್ ಕಾಮ್): ವೆಟರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಅಣ್ಣಾ ಸ್ಟೇಡಿಯಂನಲ್ಲಿ ಫೆ. 2 ರಿಂದ 4ರವರೆಗೆ ನಡೆದ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದ 35 ವಯೋಮಾನ ವಿಭಾಗದಲ್ಲಿ ಕಳಂಜ ಗ್ರಾಮದ ಮಧುಚಂದ್ರ ಭಾಗವಹಿಸಿ ಹಲವು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.100 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ ಸುತ್ತಿಗೆ ಎಸೆತದಲ್ಲಿ ತೃತೀಯ, 4×100 ಮೀ ರಿಲೇ ಮತ್ತು 4×400 ಮೀ ರಿಲೇಯಲ್ಲಿ ದ್ವಿತೀಯ ಹಾಗೂ 4×100 ಮಿಕ್ಸ್ ಡ್ ರಿಲೇ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಸ್ವೀಡನ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಧುಚಂದ್ರ ಅವರು ಕಳಂಜದ ಮಾರಪ್ಪ ಕುಲಾಲ್ ಮತ್ತು ಸುನಂದಾ ದಂಪತಿಯ ಸುಪುತ್ರ.
ಸ್ವೀಡನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಮಧುಚಂದ್ರ ಕಳಂಜ ಆಯ್ಕೆ
sports
1 Min Read