ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ತುಳುನಾಡ ಸಂಸ್ಕೃತಿ, ಆಚಾರ, ಕಲೆ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ನಾಗೇಶ್ ಕುಲಾಲ್ ನೇತೃತ್ವದ `ಕುಳಾಯಿ ಕಲಾಕುಂಭ ಸಾಂಸ್ಕೃತಿಕ ವೇದಿಕೆ’ಯು ತಮ್ಮ ಅತ್ಯುತ್ತಮ ಸಂಘಟೆಗಾಗಿ ಈ ಬಾರಿಯ `ಸ್ವಸ್ತಿ ಸಿರಿ’ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ.
ಕಳೆದ 33 ವರ್ಷಗಳಿಂದ ವಿವಿಧ ಸಾಮಾಜಿಕ ಆರೋಗ್ಯ ಸಾಂಸ್ಕೃತಿಕ ಕ್ರೀಡಾ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ನೀಡಲಾಗುವ ಈ ಪ್ರಶಸ್ತಿಯನ್ನು ಮಾರ್ಚ್ ನಾಲ್ಕರಂದು ಬಂಗ್ಲೆ ಮೈದಾನದಲ್ಲಿ ಕ್ಲಬ್ನ 35ನೇ ಸಂಭ್ರಮಾಚರಣೆಯ ಸಂದರ್ಭ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಅದೇ ದಿನ ಬೆಳಿಗ್ಗೆ ಕ್ಲಬ್ನ ವತಿಯಿಂದ ೧೦ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕೂಡಾ ನಡೆಯಲಿದೆ.