ಬೆಂಗಳೂರು : ಕುಲಾಲ ಸಂಘ ಬೆಂಗಳೂರು ಇದರ ಸುವರ್ಣ ಮಹೋತ್ಸವದ ಅಂಗವಾಗಿ ‘ಸುವರ್ಣ ಸಂಭ್ರಮೋತ್ಸವ’ ಕಾರ್ಯಕ್ರಮವನ್ನು 13ನೇ ನವೆಂಬರ್ 2022ರ ಭಾನುವಾರ ಬೆಳಿಗ್ಗೆ 9.00 ರಿಂದ ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮಗಳ ಅಂಗವಾಗಿ, ಬೆಳಿಗ್ಗೆ 9.00ಕ್ಕೆ ಮಕ್ಕಳಿಗಾಗಿ ವೇಷಭೂಷಣ / ಛದ್ಮವೇಷ (ಕೃಷ್ಣ ರಾಧೆ ವೇಷ ಅಥವಾ ಸ್ವಾತಂತ್ರ್ಯ ಸೇನಾನಿಗಳ ವೇಷ). ಉದ್ಘಾಟನಾ ಸಮಾರಂಭ 10.30ಕ್ಕೆ ನಡೆಯಲಿದೆ. ಮಾನ್ಯ ಸಹಕಾರ ಸಚಿವರು ಕರ್ನಾಟಕ ಸರಕಾರ ಶ್ರೀ ಎಸ್.ಟಿ. ಸೋಮಶೇಖರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಂಘ, ಬೆಂಗಳೂರು ಅಧ್ಯಕ್ಷರು ಶ್ರೀ ಪುರುಷೋತ್ತಮ್ ಚೇಂಡ್ಲಾ ವಹಿಸಲಿದ್ದಾರೆ.
ಅತಿಥಿಗಳಾಗಿ ಶ್ರೀ ರವೀಂದ್ರ ಮುನ್ನಿಪ್ಪಾಡಿ, ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ, ಶ್ರೀ ಗೋಪಾಲಕೃಷ್ಣ ವಾಂತಿಚ್ಚಾಲ್, ಪ್ರಧಾನ ಕರ್ಮಿ, ಶ್ರೀ ಮಂತ್ರಮೂರ್ತಿ ಗುಳಿಗೆ ಸನ್ನಿಧಿ, ಬದಿಯಡ್ಕ ಡಾ|| ಎಂ.ಪಿ. ವರ್ಷ, CEO, ಕ್ರೆಡಿಟ್ ಐ ಸಂಸ್ಥೆ, ಮೈಸೂರು, ಶ್ರೀ ರಘುವೀರ್ ನಾಯಕ್, ಅಧ್ಯಕ್ಷರು, ಪರಿವಾರ ಬಂಟ್ಸ್ ಸಂಘ, ಬೆಂಗಳೂರು ಶ್ರೀಮತಿ ಭಾನುಮತಿ ಡಿ. ಶೆಟ್ಟಿಗಾರ್, ಅಧ್ಯಕ್ಷರು, ದ. ಕ. ಪದ್ಮಶಾಲಿ ಸಮಾಜ ಸೇವಾ ಕೂಟ ಬೆಂಗಳೂರು, ಶ್ರೀ ಚೇತನ್ ಮೊಗವೀರ, ಅಧ್ಯಕ್ಷರು, ಮೊಗವೀರ ಸಂಘ, ಬೆಂಗಳೂರು ಶ್ರೀ ಭಾಸ್ಕರ್ ಎಂ. ಪೆರುವಾಯಿ, ಅಧ್ಯಕ್ಷರು, ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ, ಪುತ್ತೂರು, ಶ್ರೀ ವಿಶ್ವನಾಥ ಕುಲಾಲ್, ಅಧ್ಯಕ್ಷರು, ಕುಲಾಲ ಸಮಾಜ ಸುಧಾರಕ ಸಂಘ, ಕುಂದಾಪುರ ಶ್ರೀ ಸಂತೋಷ್ ಕುಲಾಲ್ ಪಕ್ಕಾಲು, ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ, ಪೆರ್ಡೂರು, ಶ್ರೀ ಸತೀಶ್ ಕುಲಾಲ್ ನಡೂರು, ವಿಭಾಗಿಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಇವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಗಳ ಅಂಗವಾಗಿ : ಅತಿಥಿಗಳ ಆಸನ ಸ್ವೀಕಾರ, ಪ್ರಾರ್ಥನೆ, ಸ್ವಾಗತ, ಉದ್ಘಾಟನೆ, ಪ್ರಾಸ್ತವಿಕ ಭಾಷಣ, ಉದ್ಘಾಟಕರ ಭಾಷಣ, 50 ವರ್ಷಗಳ ಅವಧಿಯಲ್ಲಿ ಸಂಘದ ಅಧ್ಯಕ್ಷರಾಗಿ ದುಡಿದವರಿಗೆ ಗೌರವಾರ್ಪಣೆ, ಅತಿಥಿಗಳ ಭಾಷಣ, ಅಧ್ಯಕ್ಷರ ಭಾಷಣ. ಮದ್ಯಾಹ್ನ 12.00 ರಿಂದ ಮಹಿಳಾ ಘಟಕ, ಯುವ ಘಟಕ ಮತ್ತು ಸಾಂಸ್ಕೃತಿಕ ಸಮಿತಿ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಮಧ್ಯಾಹ್ನ ೩.ಕ್ಕೆ -ಶ್ರೀಧಾಮ ಮಾಣಿಲ ಸತ್ಕರ್ಮ ತಪಸ್ವಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಕುಲಾಲ ಸಂಘ, ಬೆಂಗಳೂರು ಅಧ್ಯಕ್ಷರು ಶ್ರೀ ಪುರುಷೋತ್ತಮ್ ಚೇಂಡ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಶ್ರೀ ಡಿ.ವಿ. ಸದಾನಂದ ಗೌಡ, ಮಾನ್ಯ ಲೋಕಾಸಭಾ ಸದಸ್ಯರು ಮತ್ತು ಮಾಜಿ ಮುಖ್ಯ ಮಂತ್ರಿಗಳು, ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವರು, ಕರ್ನಾಟಕ ಸರಕಾರ ಶ್ರೀ ವಿ. ಸುನೀಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇಂಧನ ಸಚಿವರು, ಕರ್ನಾಟಕ ಸರಕಾರಕುಮಾರ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇಂಧನ ಸಚಿವರು, ಕರ್ನಾಟಕ ಸರಕಾರ, ಶ್ರೀ ಬಿ.ಕೆ. ಹರಿಪ್ರಸಾದ್, ಮಾನ್ಯ ವಿರೋದ ಪಕ್ಷದ ನಾಯಕರು, ಕರ್ನಾಟಕ ವಿಧಾನ ಪರಿಷತ್ ಶ್ರೀ ಸಂಜೀವ ಮಠಂದೂರು, ಮಾನ್ಯ ಶಾಸಕರು, ಪುತ್ತೂರು ವಿಧಾನ ಸಭಾಕ್ಷೇತ್ರ, ಶ್ರೀ ಮುರಳೀಧರ ಹೆಗ್ಡೆ, ಅಧ್ಯಕ್ಷರು, ಬಂಟ್ಸ್ ಸಂಘ, ಬೆಂಗಳೂರು ಶ್ರೀ ಎಂ. ವೇದಕುಮಾರ್, ಅಧ್ಯಕ್ಷರು, ಬಿಲ್ಲವ ಆಸೋಸಿಯೇಷನ್, ಬೆಂಗಳೂರು, ಶ್ರೀಮತಿ ಕಸ್ತೂರಿ ಪಂಜ, ಮಾಜಿ ಉಪಾಧ್ಯಕ್ಷರು, ದ.ಕ.ಜಿಲ್ಲಾ ಪಂಚಾಯತ್ , ಶ್ರೀ ಮಯೂರ್ ಉಳ್ಳಾಲ್, ಅಧ್ಯಕ್ಷರು, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ, ಮಂಗಳೂರು, ಶ್ರೀ ಗಿರೀಶ್ ಬಿ. ಸಾಲಿಯಾನ್, ಅಧ್ಯಕ್ಷರು, ಜ್ಯೋತಿ ಕೋ-ಆಪರೇಟಿವ್ ಬ್ಯಾಂಕ್, ಮುಂಬೈ, ಶ್ರೀ ದೇವದಾಸ್ ಎಲ್, ಕುಲಾಲ್, ಅಧ್ಯಕ್ಷರು, ಕುಲಾಲ ಸಂಘ ಮುಂಬೈ, ಶ್ರೀ ಶ್ರೀನಿವಾಸ್ ಆರ್., ಅಧ್ಯಕ್ಷರು, ಕುಂಬಾರ ಸಂಘ, ಬೆಂಗಳೂರು ಶ್ರೀ ಸುರೇಶ್ ಕುಲಾಲ್, ಅಧ್ಯಕ್ಷರು, ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ನಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಖ್ಯಾತ ವೈದ್ಯರು, ಸಮಾಜ ಸೇವಕರು, ಕರ್ನಾಟಕ ರಾಜ್ಯ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರು ಡಾ|| ಅಣ್ಣಯ್ಯ ಕುಲಾಲ್ ಉಳ್ಳೂರು ಅವರಿಗೆ ಸನ್ಮಾನಿಸಲಿದ್ದಾರೆ.
ನಂತರ ಅತಿಥಿಗಳ ಆಸನ ಸ್ವೀಕಾರ, ಪ್ರಾರ್ಥನೆ, ಸ್ವಾಗತ, ಪ್ರಾಸ್ತವಿಕ ಭಾಷಣ, ಸ್ಮರಣ ಸಂಚಿಕೆ ಬಿಡುಗಡೆ, ‘ಕುಲಾಲ ಕೀರಿಟಿ’ ಗೌರವ ಪ್ರಧಾನ, ಅತಿಥಿಗಳ ಭಾಷಣ, ಸಭಾಧ್ಯಕ್ಷರ ಭಾಷಣ, ಧನ್ಯವಾದ ಸಮರ್ಪಣೆ ನಡೆಯಲಿದೆ.
ಶ್ರೀಮತಿ ಕುಶಲಾಕ್ಷೀ ವಿ. ಕಣ್ವತೀರ್ಥ, ಸಾಹಿತಿ, ಶ್ರೀ ನಾಗೇಶ್ ಕುಲಾಲ್ ನಾಗರಕೊಡಿಗೆ, ಯಕ್ಷಗಾನ ಭಾಗವತರು ಶ್ರೀ ಕರಿಸಿದ್ದಪ್ಪ ಕುಂಬಾರ, ಸಂಶೋಧನಾಧಿಕಾರಿ, ಕುಂಬಾರರ ಕುಲ ಶಾಸ್ತ್ರಿಯ ಅಧ್ಯಯನ ಕೇಂದ್ರ, ಹಂಪಿ, ಶ್ರೀ ಹೆಚ್.ಕೆ. ನಯನಾಡು, ಸಾಹಿತಿ, ರಂಗನಟ, ಶ್ರೀ ಮಂಜುನಾಥ್ ಕುಲಾಲ್ ಹಿಲಿಯಾಣ, ಸಾಹಿತಿ ಮತ್ತು ನಿರೂಪಕರು, ಶ್ರೀ ಮನೋಜ್ ಕುಲಾಲ್ ಪುತ್ತೂರು, ಚಲನಚಿತ್ರ ನಾಯಕ ನಟರು, ಶ್ರೀ ಭರತ್ ಸೌಂದರ್ಯ, ಜನಸೇವೆ, ಯುವ ಸಂಘಟಕರು ಮತ್ತು ಸಮಾಜ, ಶ್ರೀ ನವೀನ್ ಅಮ್ಮೆಂಬಳ, ಪತ್ರಕರ್ತರು, ಶ್ರೀ ನಾಗೇಶ್ ಕುಲಾಲ್, ಕಲಾಕುಂಭ ಸಾಂಸ್ಕೃತಿಕ ವೇದಿಕೆ, ಕುಳಾಯಿ, ಡಾ|| ರಶ್ಮಿ ಅರುಣ್ ಕುಮಾರ್, ಪತ್ರಕರ್ತರು, ಶ್ರೀ ಟಿ.ಸಿ. ನಟರಾಜ್, ಉಪಾಧ್ಯಕ್ಷರು, ಅಖಿಲ ಭಾರತೀಯ ಪ್ರಜಾಪತಿ ಮಹಾಸಂಘ ಡಾ|| ಶ್ರೀನಿವಾಸನ್ ವೇಲು, ಹೃದಯ ತಜ್ಞರು, ಅಧ್ಯಕ್ಷರು ಶ್ರೀನಿವಾಸ ಫೌಂಡೇಶನ್ ಇವರ ಸಾಧನೆಗೆ ಈ ಕಾರ್ಯಕ್ರಮದಲ್ಲಿ ಕುಲಾಲ ಕಿರೀಟ ಬಿರುದು ನೀಡಿ ಸನ್ಮಾನಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಸಂಜೆ 6.30ರಿಂದ ಶಿವದೂತೆ ಗುಳಿಗೆ ವಿಭಿನ್ನ ಶೈಲಿಯ ತುಳುನಾಟಕ ನಡೆಯಲಿದೆ.