
ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೇರಳ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮುಜುಂಗಾವು ಶ್ರೀ ಭಾರತಿ ವಿದ್ಯಾಪೀಠ ಪ್ರೌಢಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ಸಿ ವಿ ಅವರು ಎಲ್ಲಾ ವಿಷಯಗಳಲ್ಲಿ ಎ-ಪ್ಲಸ್ ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ವಿಷ್ಣುಮೂರ್ತಿ ನಗರದ ನಿವಾಸಿ ಚಂದ್ರನಾಥ್ ಬಂಜನ್ ಹಾಗೂ ಗಾಯತ್ರಿ ಬಂಗೇರ ದಂಪತಿಯ ಸುಪುತ್ರಿ.

