ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಇದರ ಸಂಶೋಧನಾ ವಿದ್ಯಾರ್ಥಿ ಯೋಗೀಶ್ ಕುಮಾರ್ ಅವರು `ಕರ್ನಾಟಕ ಮತ್ತು ಗೋವಾ ಸಾಗರ ವಲಯದಲ್ಲಿ ಅಸಾಂಪ್ರದಾಯಿಕ ಬ್ರಚುರನ್ ಮತ್ತು ಸ್ಟೋಮ್ಯಾಟೋಪೋಡ್ ಸಂಪನ್ಮೂಲಗಳ ಲಭ್ಯತೆ ಮತ್ತು ಅವುಗಳ ಆಹಾರ ಮತ್ತು ಆಹಾರೇತರ ಉತ್ಪನ್ನಗಳಲ್ಲಿ ಬಳಕೆಯ ಸಾಧ್ಯತೆಗಳು’ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಜೀವವಿಜ್ಞಾನ ವಿಭಾಗದಲ್ಲಿ ಡಾಕ್ಟರೇಟ್ ಪದವಿ ನೀಡಿದೆ. ಕಾಸರಗೋಡು ಪೈವಳಿಕೆ ಸಮೀಪದ ಮಂಡೆಕಾಪು ನಿವಾಸಿ ಸೇಸಪ್ಪ ಮೂಲ್ಯ ಮತ್ತು ಶಾಲಿನಿ ದಂಪತಿಯ ಪುತ್ರರಾದ ಇವರು, ಪ್ರಸ್ತುತ ಮಂಗಳೂರು ಐಸಿಎಆರ್ -ಸಿಎಂಎಫ್ ಆರ್ ಐ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯೋಗೀಶ್ ಕುಮಾರ್ ಮಂಡೆಕಾಪು ಅವರಿಗೆ ಡಾಕ್ಟರೇಟ್
Kulal news
1 Min Read