
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಚೆನ್ನಕೇಶವ ನಗರದ ಶ್ರೀ ಚೆನ್ನಕೇಶವ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶರ್ಮಿಳಾ ಕುಲಾಲ್ 91% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರು ಕುಲಾಲ ಸಂಘ ಇದರ ಸಕ್ರೀಯ ಸದಸ್ಯರಾದ ಗಣಪ ಕುಲಾಲ್ ಹಾಗೂ ಜ್ಯೋತಿ ದಂಪತಿಯ ಸುಪುತ್ರಿ.
