
ಧಾರವಾಡ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಧಾರವಾಡ ಜೆಎಸ್ ಎಸ್ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಪ್ರಗತಿ ಮೂಲ್ಯ 99.36%ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ರಮೇಶ್ ಮೂಲ್ಯ ಮತ್ತು ಕವಿತಾ ಮೂಲ್ಯ ದಂಪತಿಯ ಸುಪುತ್ರಿ.
