ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಂಗಳೂರು ಪಿ ಎ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕದ್ರಿ ನಿವಾಸಿ, ಚಂದನಾ ಬಿ ಆರ್ ಅವರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಮಂಡಿಸಿದ `ಆನ್ ಅಪ್ರಾಕ್ಸಿಮೇಷನ್ ಆಲ್ಗೊರಿತಂ ಫಾರ್ ರಿಲೈಯೇಬಲ್ ಮಲ್ಟಿಕಾಸ್ಟ್ ಟ್ರೀ ಇನ್ ಆಫ್ಟಿಕಲ್ ನೆಟ್ವರ್ಕ್ ‘ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೋ. ಎ ಎಂ ಖಾನ್ ಅವರ ಮಾರ್ಗದರ್ಶನದಲ್ಲಿ ಅವರು ಸಂಶೋಧನೆಯನ್ನು ನಡೆಸಿದ್ದು, ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸಿದರು. ಚಂದನಾ ಅವರು ದಿ. ರಾಘವ ಅಂಬಿಕಾರೋಡ್ ಹಾಗೂ ಮಾಲತಿ ಅವರ ಪುತ್ರಿಯಾಗಿದ್ದು, ವಕೀಲ ಉದಯಾನಂದ ಅವರ ಪತ್ನಿಯಾಗಿದ್ದಾರೆ.
ಪ್ರಾಧ್ಯಾಪಕಿ ಚಂದನಾ ಬಿ.ಆರ್ ಅವರಿಗೆ ಡಾಕ್ಟರೇಟ್
Kulal news
1 Min Read