ಕಾರ್ಕಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಜ್ವಲ್ ಕುಲಾಲ್ ಅವರು ಮಂಡಿಸಿದ ಸ್ಟಡೀಸ್ ಆನ್ ಹೈಬ್ರಿಡ್ ಪಾಲಿಮರ್ ಹೈಡ್ರೋಜೆಲ್ ನ್ಯಾನೋ ಕಾಂಪೋಸಿಟ್ಸ್ : ಪ್ರಿಪರೇಶನ್, ಕ್ಯಾರೆಕ್ಟರೈಸೇಶನ್ ಆಂಡ್ ಅಪ್ಲಿಕೇಶನ್ಸ್ ಮಹಾ ಪ್ರಬಂಧವನ್ನು ಪುರಸ್ಕರಿಸಿ ಮಂಗಳೂರು ವಿವಿ ಪಿ.ಎಚ್.ಡಿ ನೀಡಿ ಗೌರವಿಸಿದೆ. ಮಂಗಳೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ವಿಶಾಲಾಕ್ಷಿ ಬಿ. ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ನಿರೂಪಕರಾಗಿ, ಕ್ರೀಡಾ ವೀಕ್ಷಕ ವಿವರಣೆಕಾರರಾಗಿ, ಕ್ವಿಜ್ ಮಾಸ್ಟರ್ ಆಗಿ ತೊಡಗಿಸಿಕೊಂಡಿರುವ ಪ್ರಜ್ವಲ್ ಅವರು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ನೀರಿನ ಶುದ್ಧೀಕರಣದಲ್ಲಿನ ಪರಿಣಾಮಕಾರಿ ಸಂಶೋಧನೆಯನ್ನು ಗುರುತಿಸಿ ೨೦೨೦ರಲ್ಲಿ ಕೋಲ್ಕತ್ತಾದ ಇಂಡಿಯನ್ ಕೆಮಿಕಲ್ ಸೊಸೈಟಿ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಜ್ವಲ್ ಕುಲಾಲ್ ಅವರು ಹಿರ್ಗಾನ ಗ್ರಾಮದ ಚಂದ್ರಶೇಖರ ಕುಲಾಲ್ ಮತ್ತು ಜಲಜಾ ದಂಪತಿಯ ಪುತ್ರ.
ಜ್ಞಾನಸುಧಾ ಕಾಲೇಜಿನ ಉಪನ್ಯಾಸಕ ಪ್ರಜ್ವಲ್ ಕುಲಾಲ್ ಅವರಿಗೆ ಡಾಕ್ಟರೇಟ್
Kulal news
1 Min Read