ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ದ ಕರಾವಳಿ ವಿಭಾಗ ಹಾಗೂ ಕುಂಭ ವೈದ್ಯರ ಕೂಟ ಹಾಗೂ ಮಂಗಳೂರು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಆಲ್ ಇಂಡಿಯಾ ನೀಟ್ ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಕರ್ನಾಟಕದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಡಾ.ಚಿದಾನಂದ ಕುಂಬಾರ ಬೆಳಗಲಿ ಅವರನ್ನು IMA ಹಾಲ್ ಮಂಗಳೂರು (ವೆನ್ಲೋಕ್ ಆಸ್ಪತ್ರೆ ಬಳಿ) ಇಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಐಎಂಎಯ ಡಾ. ದಿವಾಕರ್ ರಾವ್, ಡಾ. ಕೆ ಆರ್ ಕಾಮತ್, ಡಾ. ಜಿಕೆ ಭಟ್, ಡಾ. ಸದಾನಂದ ಪೂಜಾರಿ, ಕುಂಬಾರ ಸಮುದಾಯದ ಹಿರಿಯ ಶಿಕ್ಷಣ ತಜ್ಞರಾದ ಮಂಗಳೂರು ವಿವಿ ನಿವೃತ್ತ ಕುಲ ಸಚಿವ ಡಾ ಜನಾರ್ಧನ್, ರಾಜ್ಯ ಕುಂಬಾರ ಮಹಾ ಸಂಘದ ಮಹಾಬಲ ಕುಲಾಲ್, ಅಶೋಕ್ ಕುಲಾಲ್, ಸುಧಾಕರ್ ಸಾಲ್ಯಾನ್, ಕರ್ನಾಟಕ ರಾಜ್ಯ ಕುಂಬಾರ ಕುಲಾಲ್ ಯುವ ವೇದಿಕೆಯ ಜಯೇಶ್ ಗೋವಿಂದ, ಗಂಗಾಧರ್ ಬಂಜನ್, ಗಣೇಶ ಕುಲಾಲ್, ಸುಕುಮಾರ್ ಬಂಟ್ವಾಳ, ಕಾರ್ತಿಕ್ ಬಂಟ್ವಾಳ, ಲಕ್ಶ್ಮಣ ಅಗ್ರಬೈಲು ಕುಲಾಲ್, ಕುಂಬಾರ ಮಾತೃ ಸಂಘದ ಮಹಿಳಾ ಘಟಕದ ಪ್ರಮೀಳಾ ಅನಿಲ್ ಸಾಲ್ಯಾನ್, ರೇಣುಕಾ ಶ್ರೀನಿವಾಸ್, ಸಾವಿತ್ರಿ ಮಹಾಬಲ ಹಾಂಡ, ಲೀಲಾವತಿ ಟೀಚರ್, ಮಮತಾ ಕುಲಾಲ್, ಕುಂಭ ವೈದ್ಯ ಕೂಟದ ಡಾ. ಶ್ರೀನಿವಾಸ್, ಡಾ. ಚೈತ್ರ, ಡಾ. ಚೇತನ್ ಸಹಿತ ಹಿರಿ ಕಿರಿಯ ನಾಯಕರು ಭಾಗವಹಿಸಿದ್ದರು, ಐಎಂಎಯ ಮಾಜಿ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಕುಂಬಾರ ಸಮುದಾಯದ ಹಿರಿಯ ನಾಯಕರಾದ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.