ಬೆಳ್ಮಣ್ಣು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಂಘ ನಾನಿಲ್ತಾರ್(ರಿ), ಮುಲ್ಲಡ್ಕ – ಮುಂಡ್ಕೂರು ಇದರ 33 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆಯ ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು ಹಸ್ತಾಂತರ, ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ಡಿ. 12ರಂದು ಸಂಘದ ಅಧ್ಯಕ್ಷರಾದ ಶ್ರೀ ಕುಶ ಆರ್ ಮೂಲ್ಯರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಉದ್ಘಾಟಕರಾಗಿ ಮುಂಬೈ ಉದ್ಯಮಿ ಶ್ರೀ ಐತು ಆರ್ ಮೂಲ್ಯ, ಮುಖ್ಯ ಅತಿಥಿಗಳಾಗಿ *ನಾಗೇಶ್ ಕುಲಾಲ್, ಕುಳಾಯಿ(ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ), ಸುಧಾಕರ್ ಕುಲಾಲ್(ಸಿಇಒ, ಕುಂಬಾರರ ಗುಡಿಕೈಗಾರಿಕೆ ಸಹಕಾರಿ ಸಂಘ(ರಿ) ಪೆರ್ಡೂರು, ಜ್ಯೋತಿ ಕುಲಾಲ್(ಅಧ್ಯಕ್ಷರು, ಮಹಿಳಾ ಘಟಕ, ಕಾರ್ಕಳ ಕುಲಾಲ ಸಂಘ), ಬೊಗ್ಗು ಮೂಲ್ಯ(ಉಪಾಧ್ಯಕ್ಷರು), ದಿನೇಶ್ ಕುಲಾಲ್(ಪ್ರಧಾನ ಕಾರ್ಯದರ್ಶಿ), ದೀಪಕ್ ಕುಲಾಲ್(ಅಧ್ಯಕ್ಷರು, ಯುವ ವೇದಿಕೆ), ಶ್ರೀಮತಿ ರತ್ನಾ ಜಿ ಮೂಲ್ಯ(ಅಧ್ಯಕ್ಷರು, ಮಹಿಳಾ ಘಟಕ) ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಕುಲಾಲ ಸಮುದಾಯದ ಒಂಭತ್ತು ಸಾಧಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಸನ್ಮಾನಿತಗೊಂಡ ಸಾಧಕರು :
ಗಣೇಶ್ ಪಂಜಿಮಾರು( ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು), ಕುಶ ಆರ್ ಮೂಲ್ಯ( ಅಧ್ಯಕ್ಷರು, ಇನ್ನಾ ಗ್ರಾಮ ಪಂಚಾಯತ್), ಸಂತೋಷ್ ಕುಲಾಲ್ ಪದವು(ನಿರ್ವಾಹಕರು, ಕುಲಾಲ ಚಾವಡಿ ವಾಟ್ಸಪ್ ಗ್ರೂಪ್, ವಸಂತ್ ಕುಮಾರ್(ಸಂಪಾದಕರು, ಮಾಧ್ಯಮ ಬಿಂಬ ಪತ್ರಿಕೆ), ಶಶಿಕಲಾ ಕುಲಾಲ್(ಮುಖ್ಯ ನಿರ್ವಾಹಕರು, ಶಶಿ ಕಿಚನ್ ಯೂಟ್ಯೂಬ್ ಚಾನೆಲ್), ಪ್ರಕಾಶ್ ಕುಲಾಲ್(ಕಂಬಳ ಕೂಟ ಮತ್ತು ಪ್ರಗತಿಪರ ಕೃಷಿಕರು), ತಿಲಕ್ ಕುಲಾಲ್(ಮೊಳೆಯ ಮೂಲಕ ವಿಶ್ವ ದಾಖಲೆ), ನಾಗೇಶ್ ಕುಲಾಲ್, ಕುಳಾಯಿ(ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ), ನಿತೇಶ್ ಕುಲಾಲ್, ಕಾಂತಾವರ(ತುಳು ರಂಗಭೂಮಿ ಕಲಾವಿದರು).
ದಾನಿಗಳ ಸಹಕಾರ ಪ್ರೋತ್ಸಾಹದಿಂದ ವೈದ್ಯಕೀಯ ನೆರವು ಹಸ್ತಾಂತರ ಹಾಗೂ ಸಂಘದ ವ್ಯಾಪ್ತಿಗೊಳಪಟ್ಟ SSLC ಹಾಗೂ ದ್ವಿತೀಯ PUC ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 80% ಗಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಆ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.