ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವರ್ಲ್ಡ್ ಕಿಕ್ ಬಾಕ್ಸಿಂಗ್ ನೆಟ್ವರ್ಕ್ ಇಂಡಿಯಾ ಸಂಸ್ಥೆಯು ಈಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಪ್ರೊ–ಯಾಮ್ ನ್ಯಾಷನಲ್ ಟೈಟಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಮಂಗಳೂರಿನ ಸುಕೀರ್ತ್ ಕುಲಾಲ್ ಅವರು ನ್ಯಾಷನಲ್ ಕಿಕ್ಬಾಕ್ಸಿಂಗ್ ಲೈಟ್ ಹೆವಿವೇಟ್ ಮತ್ತು ಫೆದರ್ವೇಟ್ ಚಾಂಪಿಯನ್ ಪಡೆದಿದ್ದಾರೆ.
ಕಾಂಬ್ಯಾಟ್ ಸ್ಪೋರ್ಟ್ಸ್ ಅಕಾಡೆಮಿ ಮಂಕಿ ಮೇಹಮ್ ಫೈಟ್ ಕ್ಲಬ್ನ ಮುಖ್ಯ ಶಿಕ್ಷಕ ನಿತೇಶ್ ಚಂದ್ರಕುಮಾರ್ ಈ ಕುರಿತು ಮಾಹಿತಿ ನೀಡಿದರು. ಆತ್ಮ ರಕ್ಷಣೆ, ಸಾಮಾನ್ಯ ಫಿಟ್ನೆಸ್ ಅಥವಾ ಯುದ್ಧ ಕ್ರೀಡೆಯಾಗಿ ಕಿಕ್ ಬಾಕ್ಸಿಂಗ್ ಅನ್ನು ಅಭ್ಯಾಸ ಮಾಡುತ್ತಾರೆ. ಈ ಕ್ರೀಡೆ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಒಲಿಂಪಿಕ್ ಕ್ರೀಡೆಯಾಗಿ ಇದು ಮನ್ನಣೆ ಪಡೆದಿದೆ ಎಂದು ಅವರು ತಿಳಿಸಿದರು. ಸುಕೀರ್ತ್ ಕುಲಾಲ್ ಅವರು ಕೋಡಿಕಲ್ ನ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಉಮಾನಾಥ್ ಮೂಲ್ಯ ಮತ್ತು ಯಶೋಧಾ ದಂಪತಿಯ ಸುಪುತ್ರ.