ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತ ಸಮಿತಿಯ ನೇತೃತ್ವದಲ್ಲಿ ಮಾತೃ ಸಂಘದ ಆಡಳಿತಕೊಳಪಟ್ಟ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಇದರ ಜೀರ್ಣೋದ್ದಾರಕ್ಕೆ ಸಂಬಂಧಿಸಿದಂತೆ ಚಿಂತನಾ ಸಭೆಯು ಜುಲೈ 25ರಂದು ನಡೆಯಿತು.
ನಾಸಿಕ್ ಬಿ. ಎಚ್. ಬಂಗೇರ ಸಭಾ ಭವನದಲ್ಲಿ ಮಾತೃ ಸಂಘದ ಅಧ್ಯಕ್ಷರಾದ ಶ್ರೀ ಮಯೂರ್ ಉಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಧಿ ಸಂಗ್ರಹಣಾ ಸಮಿತಿಯ ಹಿರಿಯರು ಹಾಗು ಸಮಾಜದ ಹಿರಿಯ/ಗಣ್ಯ ವಕೀಲರು, ವೈದ್ಯರು, ಉದ್ಯಮಿಗಳ ಮಾರ್ಗದರ್ಶನದಲ್ಲಿ, ಸಮಾಜದ ವಿವಿಧ ಜವಾಬ್ದಾರಿಯ ಹಿರಿಯರು /ಗಣ್ಯರು, ಎಲ್ಲಾ ಕುಲಾಲ ಸಂಘಗಳ ಮುಖಂಡರಜೊತೆಗೆ ನಮ್ಮ ಸಮಾಜ ಹಾಗು ದೇವಸ್ಥಾನದಲ್ಲಿ ನಡೆಯಬೇಕಾದ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಸಭೆಯಲ್ಲಿ ಹಿರಿಯ ಉದ್ಯಮಿ ರಾಮಣ್ಣ ಕುಲಾಲ್ ಉಪ್ಪಿನಂಗಡಿ, ಉದ್ಯಮಿ ಲಯನ್ ಅನಿಲ್*ದಾಸ್, ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಕಾಂತ್ ಕೆ, ಉಪಾಧ್ಯಕ್ಷರುಗಳಾದ ಡಾ. ಜಯರಾಜ್ ಪ್ರಕಾಶ್, ಶ್ರೀ ದಯಾನಂದ ಅಡ್ಯಾರ್, ವಕೀಲರಾದ ಶ್ರೀ ರಾಮ್ ಪ್ರಸಾದ್, ಸಿಎ ಶ್ರೀ ಪುಂಡರಿಕಾಕ್ಷ, ಶ್ರೀ ಸುರೇಶ್ ಕುಲಾಲ್,
ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್, ಹಿರಿಯ ವಕೀಲರಾದ ಉದಯಾನಂದ ಎ., ಪುತ್ತೂರಿನ ವಕೀಲರಾದ ಭಾಸ್ಕರ್ ಪೆರುವಾಯಿ, ಶ್ರೀ ಮಹೇಶ್ ಸವಣೂರು, ಕೆಪಿಸಿಸಿ ಸದಸ್ಯರಾದ ಪ್ರಥ್ವಿರಾಜ್, ಅಬ್ಬಕ್ಕ ಟಿ . ವಿ.ಯ ಶಶಿಧರ್ ಪೋಯ್ಯತ್ ಬೈಲು, ಇಂಜಿನಿಯರ್ ಡಾ ಆನಂದ್ ಬಂಜನ್, ಮಂಜಪ್ಪ ಎ, ಬಂಟ್ವಾಳ ಕುಲಾಲ ಸಮಾಜದ ಬ್ಯಾಂಕಿನ ಅಧ್ಯಕ್ಷ ಶ್ರೀ ಸುರೇಶ್ ಕುಲಾಲ್, ಪೂರ್ಣ ಕುಂಭ ಸಹಕಾರಿ ಬ್ಯಾಂಕಿನ ಅಧ್ಯಕ್ಷ ನಾಗೇಶ್ ಕುಲಾಲ ಕುಲಾಯಿ, ಕುಂಭಶ್ರೀ ವಸತಿ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲರು ಶ್ರೀ ಗಿರೀಶ್ ಕೆಎಚ್. ಮತ್ತು ಹಾಗು ಹಲವು ಗಣ್ಯರು, ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು, ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷರು ಮತ್ತು ಸದಸ್ಯರು, ಮಹಿಳಾ ವಿಭಾಗ ಹಾಗೂ ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.