ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಲಾವಿದರ ಸಾಧನೆಗೆ ಶಾರದೆಯ ಸದಾ ಅನುಗ್ರಹವಿರುತ್ತದೆ .ಕಂಡ ಕನಸು ನನಸಾಗುವ ಶ್ರಮದ ಫಲ ಅನುಭವದ ಜೊತೆಗೆ ಪ್ರಸಿದ್ಧಿ ಗೆ ಬರುವುದು ಅಂತು ತುಂಬಾನೆ ಕಷ್ಟ ಸಾಧ್ಯ. ಅನೇಕ ಪ್ರತಿಭೆಗಳ ಪರಿಶ್ರಮಕ್ಕೆ ಸೂಕ್ತ ಅವಕಾಶ ನೀಡುವ ತಮ್ಮ ಮೊದಲ ಪ್ರಯತ್ನ ದ ಕನ್ನಡ ಆಲ್ಬಂ ಗೀತೆ ರಾಧೆ ಶ್ಯಾಂ ನಿರ್ದೇಶಕ ಜಿತಿನ್ ಕುತ್ತಾರ್. ಹಲವು ದಿನಗಳ ಶ್ರಮ, ಹಲವು ಕನಸುಗಳ ಕಂತೆ, ಹಲವಾರು ಪ್ರತಿಭೆಗಳಿಗೆ ಸುಂದರ ಕಲ್ಪನೆ ಮೂಡಿಸಿದ ಛಾಯಾಗ್ರಾಹಕ ಇಂದು ಹೊಸ ಕಲ್ಪನೆಯ ರಾಧೆ ಶ್ಯಾಂ ಅನ್ನು ಅಸ್ವಾಧಿಸುವ ಮನಸುಗಳಿಗೆ ನೀಡಲು ತಯಾರಾಗಿರುತ್ತಾರೆ. ಇದೊಂದು ಕುತೂಹಲಕಾರಿ ವಿಚಾರ ಯಾಕೆಂದರೆ ಜಿತಿನ್ ಅವರು ಅನುಭವೀ ಸುಂದರ ತಾಣಗಳ ಸಂಚಾರಿ ಫೋಟೋಗ್ರಾಫರ್ , ಅನೇಕ ಸುಂದರ ಕ್ಷಣಗಳನ್ನು ಸುಂದರ ದೃಶ್ಯಗಳಿಗೆ ಜೋಡಿಸುವ ಕೈಚಳಕ ಬಲ್ಲವರು ಅದೇ ಇವರ ಆಲ್ಬಂ ನಿರೀಕ್ಷೆಯೂ ಹೆಚ್ಚಾಗಿದೆ.
ಅನೇಕ ದಿನಗಳಿಂದ ಏನಾದರೂ ಹೊಸ ಸಾಧನೆ ಮಾಡು ಯೋಚನೆಯೇ ಈ ಆಲ್ಬಂಗೆ ಪ್ರೇರಣೆ ಎನ್ನುತ್ತಾರೆ ನಿರ್ದೇಶಕರು. ಮಿರರ್ ಇಮೇಜ್ ಫೋಟೋಗ್ರಫೀ ಪ್ರಸ್ತುತ ಪಡಿಸುವ ರಾಧೇಶ್ಯಾಂ ಕನ್ನಡ ಆಲ್ಬಂ ಗೆ , ಚಿತ್ರಕಥೆ, ಪರಿಕಲ್ಪನೆ ಮತ್ತು ನಿರ್ದೇಶನ ಜಿತಿನ್ ಕುತ್ತಾರ್ ಅವರದ್ದು. ಅನೇಕ ಆಲ್ಬಂ ಗೀತೆಗಳ ಅನುಭವೀ ಎಡಿಟರ್ ಛಾಯಾಗ್ರಾಹಕ ಬಿ.ಕೆ.ಕ್ರಿಯೇಷನ್ ನ ಬಾತು ಕುಲಾಲ್ ಮತ್ತು ನಿರೂಪಕ ಸಂತೋಷ್ ಬೇಂಕ್ಯ ಇವರ ಸಹಕಾರದಲ್ಲಿ ನಿರ್ಮಾಣವಾದ ಈ ವೀಡೀಯೋ ಆಲ್ಬಂ ಗೆ ಸುಂದರ ಕಲ್ಪನೆಗೆ ಕೊರಿಯೋಗ್ರಫೀ ಜೊತೆಗೆ ಅಭಿನಯದ ಮೂಲಕ ಮೆರುಗು ನೀಡಿದ ಪ್ರಸಿದ್ಧ ಭರತನಾಟ್ಯ ಕಲಾವಿದೆ, ಕಥಕ್ ನೃತ್ಯಪಟು, ದೇಶ ಮತ್ತು ವಿದೇಶಗಳಲ್ಲಿಕಾರ್ಯಕ್ರಮಗಳನ್ನು ನೀಡಿದ, ತೀರ್ಪುಗಾರರಾಗಿ ನಿರ್ವಹಿಸಿದ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಂ.ಬಿ.ಎ ಪದವೀಧರೆಯಾದ ಸೌಂದರ್ಯ ಕುಲಾಲ್ ಅವರು ನೀಡಿದ್ದಾರೆ ಎಂಬುದೇ ವಿಶೇಷ.
ಈ ಹಾಡಿನ ಮಧುರ ಆಲಾಪನೆ ಮಾಡಿರುವ ಸಹ್ಯಾದ್ರಿ ಕಾಲೇಜಿನ ಇಂಜಿನಿಯರಿಂಗ್ ಮತ್ತು ಮೇನೇಜ್ ಮೆಂಟ್ ವ್ಯಾಸಂಗ ಮಾಡುತ್ತಿರುವ ಅನುಭವೀ ಹಾಡುಗಾರ್ತಿ ಪ್ರತಿಭಾನ್ವಿತೆ ತೇಜಸ್ವಿನಿ ಎನ್ ವಿ .
ಇದೆಲ್ಲವನ್ನು ಗಮನಿಸಿದರೆ ಇದರ ಸುಂದರ ಸಾಹಿತ್ಯವೇ ಮೇಲುಗೈ ಹಲವಾರು ಆಲ್ಬಂ ಗೀತೆಯ ರಚನೆಗಾರ,ತುಳುನಾಡಿನ ಪರಿಚಿತ ಶೈಲು ಕುಂಪಲ ರಚನೆಯ ಈ ಹಾಡಿಗೆ, ಟೈಟಲ್ ಡಿಸೈನ್ ರುಬೀ ಆರ್ಟ್ಸ್ ನ ರತನ್ ,ಮೇಕಪ್ ರಚನಾ ಶೇಟ್,ಸಹ ನಿರ್ವಹಣೆ ಐಶ್ವರ್ಯಾ ಕುಲಾಲ್. ಇಂತಹ ಪ್ರಮುಖ ಅನುಭವೀ ಪ್ರತಿಭೆಗಳನಿರೀಕ್ಷಯ ಆಲ್ಬಂ ರಾಧೆ ಶ್ಯಾಂ.
ಹಲವಾರು ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡು ಇದೀಗ ಬಿಡುಗಡೆಗೆ ಸಿಧ್ಧವಿರುವ ಈ ಆಲ್ಬಂ ಸಾಂಗ್ ಜನಮಾನಸ ಗೆಲ್ಲುವುದರಲ್ಲಿ ಎರಡು ಮಾತಿಲ್ಲ. ಪ್ರತಿಭೆಗೆ ಪ್ರೋತ್ಸಾಹಿಸುವ ಗುಣ ಕಲಾಭಿಮಾನಿ ದೇವರುಗಳಲ್ಲಾದರೆ ಇಂತಹ ಅನುಭವೀ ತಂಡದ ಈ ಆಲ್ಬಂ ಗೀತೆಯನ್ನು ಪ್ರೋತ್ಸಾಹಿಸಿ ಮನದಾಳದಲ್ಲಿ ಸ್ಥಿರವಾಗಿಸಿ ಹೊಸ ದಾಖಲೆ ನಿರ್ಮಾಣ ಮಾಡುವಂತೆ ಸಹಕರಿಸುವುದು ಕಲಾಭಿಮಾನಿ ನಮ್ಮೆಲ್ಲರ ಕರ್ತವ್ಯ ವು ಹೌದು. ಬಹುನೀರೀಕ್ಷೆಯ ಈ ತಂಡಕ್ಕೆ ಎಲ್ಲಾ ವಿಧದ ಪ್ರೋತ್ಸಾಹ ನೀಡಿ ರಾಧೆ ಶ್ಯಾಂ ಜನಮೆಚ್ಚಿದ ಗೀತೆಯಾಗಿ ಹೊರಹೊಮ್ಮಲಿ ಎಂಬುದೇ ನಮ್ಮೆಲ್ಲರ ಆಶಯ.
ಬರಹ : ಎನ್ .ಕೆ. ಬೇಕೂರು