ವೀಡಿಯೋ ಕಂಡು ನೆಟ್ಟಿಗರ ಹೃದಯಸ್ಪರ್ಶಿ ಪ್ರತಿಕ್ರಿಯೆ
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೆಂಗಳೂರಿನ ಐಟಿ ವೃತ್ತಿಪರಾಗಿರುವ ಅರುಣ್ ಕುಲಾಲ್ ಅವರು ತಮಿಳುನಾಡಿನಲ್ಲಿ ಬೈಕ್ ಸವಾರಿ ಮಾಡುತ್ತಿದ್ದಾಗ ಪೊಲೀಸರೊಬ್ಬರು ಆತನನ್ನು ತಡೆದರು. ಬೈಕ್ ಸವಾರರನ್ನು ಪೊಲೀಸರು ಹಿಡಿದು ನಿಲ್ಲಿಸಿದರೆಂದರೆ ವಾಹನ ಸವಾರರಿಗೆ ಢವ ಢವ ಎಂದಿರುತ್ತೆ. ಯಾಕೆಂದರೆ, ಹೆಲ್ಮೆಟ್, ಮಾಸ್ಕ್, ಡಿಎಲ್, ವಾಹನದ ಎಲ್ಲ ದಾಖಲೆಗಳು ಇದ್ದರೂ ಯಾವುದಾದರೊಂದು ನೆಪ ಹೇಳಿ ದಂಡ ಹಾಕುತ್ತಾರೆಂಬುದು ಹಲವರ ಆಕ್ರೋಶ. ಈ ಹಿನ್ನೆಲೆ ಪೊಲೀಸರು ದೂರದಲ್ಲಿ ಕಂಡರೂ ಆ ರೋಡಲ್ಲಿ ಹೋಗೋದು ಬಿಟ್ಟು ಬೇರೆ ಮಾರ್ಗಗಳನ್ನ ಹಿಡಿಯುವ ಜನರೂ ಇದ್ದಾರೆ. ಇದೇ ರೀತಿ, ತಮಿಳುನಾಡಿನಲ್ಲೂ ಕರ್ನಾಟಕ ಮೂಲದ ಮೋಟಾರು ವಾಹನ ಸವಾರನನ್ನು ಅಲ್ಲಿನ ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ದಾರೆ. ಆದರೆ, ಪೊಲೀಸರು ಈ ರೀತಿ ಆತನನ್ನು ನಿಲ್ಲಿಸಿದ್ದಕ್ಕೆ ಒಳ್ಳೆಯ ಕಾರಣವಿದೆ. ಈ ಹಿನ್ನೆಲೆ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹೃದಯಸ್ಪರ್ಶಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಪರಂಗಿಪೇಟೆಯ ದೇವು ಮೂಲ್ಯ ಮತ್ತು ಕಮಲಾಕ್ಷಿ ದಂಪತಿಯ ಪುತ್ರ ಅರುಣ್ ಕುಮಾರ್ ಕುಲಾಲ್ ತಮಿಳುನಾಡಿನಲ್ಲಿ ಬೈಕ್ ಸವಾರಿ ಮಾಡುತ್ತಿದ್ದಾಗ ಪೊಲೀಸರು ಆತನನ್ನು ತಡೆದರು. ಬೈಕ್ ನಿಲ್ಲಿಸಿದ ನಂತರ, ಅದೇ ಮಾರ್ಗದಲ್ಲಿ ಸರ್ಕಾರಿ ಬಸ್ನಲ್ಲಿದ್ದ ಮಹಿಳೆಗೆ ಕೆಲವು ಔಷಧಿಗಳನ್ನು ಹಿಂದಿರುಗಿಸುವಂತೆ ಅರುಣ್ ಅವರನ್ನು ಕೋರಲಾಯಿತು. (ಈ ಬಗ್ಗೆ ಅವರ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ)
ನೀವು ಕರ್ನಾಟಕದವರೇ ಎಂದು ಪೊಲೀಸರು ಮೊದಲು ಅವರನ್ನು ಕೇಳಿದ್ದಾರೆ. ಇದಕ್ಕೆ ಹೌದು ಎಂದು ಬೈಕರ್ ಅರುಣ್ ಉತ್ತರಿಸಿದ ಬಳಿಕ, ಅದೇ ಮಾರ್ಗದಲ್ಲಿ ಮುಂದೆ ಹೋಗುತ್ತಿರುವ ಸರ್ಕಾರಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತನ್ನ ಔಷಧಿ ಬಾಟಲಿಯನ್ನು ಬೀಳಿಸಿದ್ದಾರೆ ಎಂದು ಪೊಲೀಸ್ ಹೇಳಿದ್ದು, ಆ ಬಾಟಲಿಯನ್ನು ಹಿಂತಿರುಗಿಸಲು ಬಸ್ ಅನ್ನು ಛೇಸ್ ಮಾಡುವಂತೆಯೂ ಬೈಕರ್ಗೆ ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ 10 ವರ್ಷಗಳಿಂದ ದೇಶಾದ್ಯಂತ ಬೈಕ್ ಸವಾರಿ ಮಾಡುತ್ತಿರುವ ಅರುಣ್ ಹೇಳಿಕೊಂಡಿದ್ದಾರೆ. Vedio link :
https://www.youtube.com/watch?v=fvGVaMJE8vI&t=1s
”ನಾನು ಪೊಲೀಸರು ತಡೆದ ವಿಡಿಯೋಗಳನ್ನು ಮಾಡುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ಆದರೆ, ಇದು ತುಂಬಾ‘ಅನಿರೀಕ್ಷಿತ’! ಪೋಸ್ಟ್ ಮಾಡದೆ ತಡೆ ಹಿಡಿಯಲು ಆಗಲಿಲ್ಲ ” ಎಂದು ಅರುಣ್ ತಿಳಿಸಿದ್ದಾರೆ. ಅಲ್ಲದೆ, ಟ್ರಾಫಿಕ್ ಪೊಲೀಸ್ ಹೇಳಿದಂತೆ ಆ ಬಸ್ ಅನ್ನು ಹಿಡಿಯಲು ಬೈಕನ್ನು ವೇಗವಾಗಿ ಓಡಿಸುವುದನ್ನು ವಿಡಿಯೋದಲ್ಲಿ ದಾಖಲಿಸಲಾಗಿದೆ. ಕೊನೆಗೆ ಅವರು ಬಸ್ ನಿಲ್ಲಿಸಿ ಬಾಟಲಿ ಬಾಟಲಿಯನ್ನು ಮಹಿಳೆಗೆ ಹಸ್ತಾಂತರಿಸುತ್ತಾರೆ. ಘಟನೆ ನಡೆದಾಗ ಅರುಣ್ ತೆಂಕಶಿಗೆ ತೆರಳುತ್ತಿದ್ದರು. ವಿಷಯಗಳ ಬಗ್ಗೆ ಜಾಗರೂಕರಾಗಿರಲು, ತಾನು ಪೊಲೀಸ್ ಜತೆಗಿನ ಮಾತುಕತೆಯನ್ನು ರೆಕಾರ್ಡ್ ಮಾಡಿದೆ. ಆದರೆ, ಇದು ತನಗೆ ಅಂತಹ ವಿಶಿಷ್ಟ ಅನುಭವವಾಗಿದೆ ಎಂದು ಅರುಣ್ ಹೇಳಿದ್ದಾರೆ. ಇನ್ನು, ಈ ವಿಡಿಯೋಗೆ ಅನೇಕ ಜನರು ಉತ್ತೇಜಕ ಕಾಮೆಂಟ್ಗಳನ್ನು ಮಾಡಿ ಅರುಣ್ ಅವರ ಕಾರ್ಯವನ್ನು ಕೊಂಡಾಡಿದ್ದಾರೆ. ಅರುಣ್ ಅವರು ಹಿಂದೆ ಬೈಕ್ ನಲ್ಲಿ ಹಿಮಾಲಯ ಯಾತ್ರೆ ಮಾಡಿದ್ದಾಗ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿತ್ತು.