ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸನಾತನ ನಾಟ್ಯಾಲಯ ಇದರ ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ `ಸನಾತನ-ನೃತ್ಯ-ಪ್ರೇರಣಾ’ ಕಾರ್ಯಕ್ರಮದಲ್ಲಿ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದುಷಿ ಪದವಿ ಪಡೆದ ಸಿ. ಲಾಸ್ಯ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ವಿದುಷಿ ಡಾ. ಶೋಭಿತಾ ಸತೀಶ್, ನೃತ್ಯಗುರುಗಳಾದ ವಿದುಷಿ ಶಾರದಾ ಮಣಿಶೇಖರ್, ವಿದುಷಿ ಲತಾ ನಾಗರಾಜ್ ಹಾಗೂ ಸಿ. ಲಾಸ್ಯ ಅವರ ತಂದೆ ಪತ್ರಕರ್ತ ಚಿದಂಬರ ಬೈಕಂಪಾಡಿ, ತಾಯಿ ಪುಷ್ಪಲತಾ ಮತ್ತು ಸಹೋದರಿ ಲಹರಿ ಅವರು ಉಪಸ್ಥಿತರಿದ್ದರು. ಲಾಸ್ಯ ಅವರು ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.



