ಬೆಳ್ತಂಗಡಿ : ಕುಂಭಶ್ರೀ ಕುಂಬಾರರ ಸಂಘ ಚಾರ್ಮಾಡಿ ಮಂಡಲ ಇದರ ವಾರ್ಷಿಕೋತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮವು ಇತ್ತೀಚೆಗೆ ದೋರ್ತಾಡಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿಯ ಮಾಜಿ ಕಂದಾಯ ನಿರೀಕ್ಷಕ ಹೆಚ್ ಪದ್ಮ ಕುಮಾರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಬಂದಾರು ಗ್ರಾಮ ಪಂಚಾಯತ್ ಸದಸ್ಯ ಉದಯ ಕುಮಾರ್ ಮಾತನಾಡಿ `ಕುಂಬಾರ ಜನಾಂಗದವರು ಶ್ರೇಷ್ಠ ಜನಾಂಗದವರು. ಮುಂದಿನ ದಿನಗಳಲ್ಲಿ ಸಮಾಜ ಪರಿವರ್ತನೆಯಲ್ಲಿ ಕುಂಬಾರರು ತಮ್ಮದೇ ಆದ ಕೊಡುಗೆಯನ್ನು ನೀಡಲಿದ್ದಾರೆ.’ ಎಂದರು. ಮುಖ್ಯ ಅತಿಥಿಯಾಗಿ ಸಂಜೀವ ಕುಂಬಾರ ಕಾರ್ಯತಡ್ಕ ಹಾಗೂ ಊರಿನ ಹಿರಿಯರು, ಗ್ರಾಮ ಪಂಚಾಯತ್ ಸದಸ್ಯರು ಕೂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊರಗಪ್ಪ ದೋರ್ತಾಡಿ ಸ್ವಾಗತಿಸಿ, ಶ್ರೀನಿವಾಸ ಚಾರ್ಮಾಡಿ ಧನ್ಯವಾದವಿತ್ತರು. ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಸಮಾಜದ ಬಡ ಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಲಾಯಿತು ಹಾಗೂ ಕಲಿಕೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಈ ಸಂದರ್ಭ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.