ಉಡುಪಿ(ಜ.೨೫, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ವತಿಯಿಂದ ಕವಯಿತ್ರಿ ಪುಷ್ಪಾಪ್ರಸಾದ್ ಅವರಿಗೆ `ಸಾಹಿತ್ಯ ಸಿರಿ’ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿಯಲ್ಲಿ ಜನವರಿ 24ರಂದು ಆಯೋಜಿಸಿದ ಸಂಘದ ಪದಾಧಿಕಾರಿಗಳ ಪದಗ್ರಹಣ, ಉದ್ಘಾಟನೆ ಹಾಗೂ ಕವಿಗೋಷ್ಠಿಯ ಸಮಾರಂಭದಲ್ಲಿ ಅವರಿಗೆ ಸಾಹಿತ್ಯ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ 2021ನೇ ಸಾಲಿನ`ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬರಹಗಾರರೂ ಕವಯಿತ್ರಿಯೂ ಆಗಿರುವ ಪುಷ್ಪಾಪ್ರಸಾದ್ ಅವರ ಸಾಹಿತ್ಯ, ಸಾಂಸ್ಕೃತಿಕ ಸೇವೆ ಹಾಗೂ ಸಂಘಟನಾ ಚತುರತೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಅವರು ಕುಲಾಲ ಸಮುದಾಯದದವರಾಗಿದ್ದು ಮೂಲತಃ ಮಡಿಕೇರಿವರು. ಪ್ರಸ್ತುತ ಉದ್ಯೋಗ ನಿಮಿತ್ತ ಕುಂದಾಪುರದಲ್ಲಿ ನೆಲೆಸಿದ್ದಾರೆ.


