ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ನಾನಿಲ್ತಾರ್ ಕುಲಾಲ ಸಂಘದ 32ನೇ ವರ್ಷದ ಮಹಾಸಭೆ, ಗ್ರಾಮ ಪಂಚಾಯತ್ ಚುನಾವಣೆ ವಿಜೇತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಉತ್ತಮ ಅಂಕ ಪಡೆದಿರುವ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ 24 ಜನವರಿ 2021ರ ಭಾನುವಾರ ನಾನಿಲ್ತಾರ್ ಕುಲಾಲ ಭವನದಲ್ಲಿ ನಡೆಯಿತು.
ಕುಲಾಲ ಸಂಘ ನಾನಿಲ್ತಾರ್ ಇದರ ಅಧ್ಯಕ್ಷರಾದ ಕುಶ. ಆರ್. ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರು ಮಾಜಿ ಅಧ್ಯಕ್ಷರಾದ ಮಂಜಪ್ಪ ಮೂಲ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕುಲಾಲ ಸಂಘ ಕಾರ್ಕಳ ಇದರ ಅಧ್ಯಕ್ಷರು ಭೋಜ ಕುಲಾಲ್ , ಕುಲಾಲ ಸಂಘ ಕುಳಾಯಿ ಇದರ ಕಾರ್ಯದರ್ಶಿ ಗಂಗಾಧರ್ ಬಂಜನ್ ಭಾಗವಹಿಸಿ ಕಾರ್ಯಕ್ರಮ ಉದ್ದೇಶಿಸಿ ಸಂಘದ ಕಾರ್ಯ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಗಿಸಿದರು.
ಸುಧಾಕರ ಕುಲಾಲ್ ಮುಂಡ್ಕೂರ್ ವಾರ್ಷಿಕ ಲೆಕ್ಕ ಪತ್ರ ವಾಚಿಸಿದರು. ಯುವ ವೇದಿಕೆ ಅಧ್ಯಕ್ಷರಾದ ದೀಪಕ್ ಕುಲಾಲ್ ಬೆಳ್ಮಣ್ ಸಂಘದ ವ್ಯವಸ್ಥಾಪಕರಾದ ಆಶಾ ವರದರಾಜ್ ವೇದಿಕೆಯಲ್ಲಿ ಉಪಸ್ತಿತರಿದ್ದರು. ಕುಲಾಲ ಸಂಘದ ಸಕ್ರಿಯ ಸದಸ್ಯ ಗೋಪಾಲ ಮೂಲ್ಯ ಧನ್ಯವಾದ ಸಮರ್ಪಣೆ ಮಾಡಿದರು. ಕು. ಹರ್ಷಿತಾ ಮತ್ತು ನಾನಿಲ್ತಾರ್ ಕುಲಾಲ ಸಂಘದ ಕಾರ್ಯದರ್ಶಿಯಾದ ದಿನೇಶ್ ಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು. ರಾಜೇಶ್ ಕುಲಾಲ್, ಚೈತ್ರೆಶ್ ಇನ್ನಾ, ಪ್ರತಿಮ ಶ್ರೀಧರ್ ಮೂಲ್ಯ, ರತ್ನ ಜಿ ಮೂಲ್ಯ , ಜಯರಾಮ್ ಕುಲಾಲ್ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.