ಮಂಗಳೂರು(ಜ.೨೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ತೊಂದರೆಯಲ್ಲಿದ್ದ ಎರಡು ಕುಟುಂಬಗಳಿಗೆ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗದ ಮಿತ್ರರಿಂದ ಸಂಗ್ರಹಿಸಲ್ಪಟ್ಟ ಒಟ್ಟು ರೂ. 69,010 ನೆರವನ್ನು ಸಂತ್ರಸ್ತ ಕುಟುಂಬಕ್ಕೆ ಜ.24ರಂದು ಹಸ್ತಾಂತರಿಸಲಾಯಿತು.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಕುಕ್ಕಾಜೆಯ ಪ್ರಕಾಶ್ ಕುಲಾಲ್-ಶಾಂತಾ ಕುಟುಂಬಕ್ಕೆ 34,505 ರೂಪಾಯಿ ಹಾಗೂ ಡಯಾಬಿಟಿಸ್ ನಿಂದ ಒಂದು ಕಾಲು ಕಳೆದುಕೊಂಡಿರುವ ಪ್ರಸ್ತುತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಯಕ್ಷಗಾನ ಕಲಾವಿದ ಕೊಳಂಬೆ ಸುಂಕದಕಟ್ಟೆ ನಿವಾಸಿಯಾದ ಗಂಗಾಧರ ಬಂಗೇರ ಅವರ ಕುಟುಂಬಕ್ಕೆ 34,505 ರೂಪಾಯಿ ನೀಡಿ ಸಾಂತ್ವನ ಹೇಳಲಾಯಿತು.
ಈ ಎರಡೂ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವೆಬ್ ಸೈಟ್ ನಲ್ಲಿ ವರದಿಯನ್ನು ಪ್ರಕಟಿಸಿ ಆರ್ಥಿಕ ಸಹಾಯ ನೀಡುವಂತೆ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಗ್ರೂಪಿನ ಮುಖಾಂತರ ಮಾಡಲಾದ ವಿನಂತಿಗೆ ಅನೇಕ ಸಹೃದಯ ದಾನಿಗಳು ಸ್ಪಂದಿಸಿದ್ದಾರೆ. ಹೀಗೆ ಸಂಗ್ರಹಿಸಲಾದ ಮೊತ್ತವನ್ನು ಎರಡೂ ಕುಟುಂಬಕ್ಕೆ ಸಮಾನವಾಗಿ ವಿತರಿಸುವ ತೀರ್ಮಾನದಂತೆ ಜನವರಿ 24, ಆದಿತ್ಯವಾರದಂದು ಮಂಗಳೂರಿನ ಎಂಪೈರ್ ಮಾಲ್ ಸಮೀಪ ಹಸ್ತಾಂತರ ಮಾಡಲಾಯಿತು. ಪ್ರಕಾಶ್ ಕುಲಾಲ್ ಅವರ ಪತ್ನಿ ಶಾಂತಾ , ಹಾಗೂ ಗಂಗಾಧರ ಬಂಗೇರ ಅವರ ಪತ್ನಿರತ್ನಾವತಿ ಅವರು ಚೆಕ್ ಸ್ವೀಕರಿಸಿ, ನೆರವು ನೀಡಿದ ಸಮಸ್ತ ದಾನಿಗಳಿಗೆ ಧನ್ಯವಾದ ಸಲ್ಲಿಸಿದರು. ಈ ಸಂದರ್ಭ ಆರ್ಥಿಕ ಸಂಗ್ರಹದ ರೂವಾರಿಗಳಾದ ಕುಲಾಲ್ ವರ್ಲ್ಡ್ ಬಳಗದ ರಂಜಿತ್ ಕುಮಾರ್ ಮೂಡಬಿದ್ರೆ, ಹೇಮಂತ್ ಕುಮಾರ್ ಕಿನ್ನಿಗೋಳಿ ಹಾಗೂ ದಾನಿಗಳಾದ ರಮೇಶ್ ಕುಮಾರ್ ವಗ್ಗ, ಸತೀಶ್ ಪಲ್ಲಮಜಲು, ವೆಂಕಟೇಶ್ ಪೂಜಾರಿ ಬಿ.ಸಿ ರೋಡ್, ಲಕ್ಷ್ಮಣ್ ಶೆಟ್ಟಿ ಬಿ.ಸಿ ರೋಡ್ ಮೊದಲಾದವರು ಉಪತಸ್ಥಿತರಿದ್ದರು.