ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಇಡೀ ರಾಜ್ಯದ ಎಲ್ಲಾ ಕುಂಬಾರ, ಕುಲಾಲ, ಮೂಲ್ಯ, ಗುಣಗ, ಹಾಂಡ, ಕುಂಬಾರ ಶೆಟ್ಟಿ, ಒಡೆಯರ್, ಕನ್ನಡ, ತುಳು, ತೆಲುಗು, ತಮಿಳು, ಲಿಂಗಾಯತ, ಉಪನಾಮದ ಎಲ್ಲಾ ಹಿರಿ-ಕಿರಿಯ ಸಂಘ, ಸಂಸ್ಥೆ, ಮಠ-ಮಂದಿರ, ಬ್ಯಾಂಕ್, ಟ್ರಸ್ಟ್, ಪ್ರತಿಷ್ಠಾನಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಜನವರಿ 24 ರವಿವಾರ ದಂದು ಬೆಳಿಗ್ಗೆ 10:30ಕ್ಕೆ ಕೆಆರ್ ವೃತ್ತ ಇಂಜಿನಿಯರ್ಸ್ ಭವನ ಬೆಂಗಳೂರಲ್ಲಿ ಕುಂಬಾರರ ಒಕ್ಕೂಟದ ರೂಪುರೇಷೆಯ ಸಭೆ ಜರುಗಲಿದೆ.
ಈಗಾಗಲೇ ಡಿಸೆಂಬರ್ 11ರಂದು ಸಮಾಜದ ಹಿರಿಯ ನಾಯಕರಾದ ನೌಕರರ ಸಂಘದ ರಾಜ್ಯಾಧ್ಯಕ್ಷ ಆರ್ ಶ್ರೀನಿವಾಸ್, ಕುಂಬಾರ ಸಂಘದ ರಾಜಾಧ್ಯಕ್ಷ ಶಿವಕುಮಾರ್ ಚೌಡಶಟ್ಟಿ, ಕುಲಾಲ ಸಂಘದ ಅಧ್ಯಕ್ಷ ಅಣ್ಣಯ್ಯ ಕುಲಾಲ್, ಕುಂಬಾರ ಸಮಾಜದ ಸಂಸ್ಥಾಪಕ ಅಧ್ಯಕ್ಷ ಚಂದಪ್ಪ ಮೂಲ್ಯ, ಕುಂಬಾರ ಸಮಾಜದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಆರ್, ಕರ್ನಾಟಕ ಪ್ರದೇಶ ಕುಂಬಾರ ಸಂಘದ ರಾಜಾಧ್ಯಕ್ಷ ಲಿಂಗರಾಜ, ಟಿಸಿ ನಟರಾಜ್, ಎಂಎಂ ಕುಂಬಾರ, ಹೀಗೆ ಅನೇಕರು ಸೇರಿ ಕುಂಬಾರ ಪೂರ್ವಭಾವಿ ಸಭೆ ಚಿಂತನಾ ಕೂಟದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಇದೇ ಜನವರಿ 24ರಂದು ಬೆಂಗಳೂರಿನಲ್ಲಿ ಒಕ್ಕೂಟದ ಸಭೆ ಮತ್ತು ರಚನೆ ಜರುಗಲಿದ್ದು ಪ್ರತಿ ಜಿಲ್ಲಾ ತಾಲೂಕಿನಲ್ಲಿರುವ ಕುಂಬಾರ ಸಮಾಜದ ಹೆಸರಿನಲ್ಲಿರುವ ಎಲ್ಲಾ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಎಲ್ಲರೂ ತಪ್ಪದೇ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಕೇಳಿಕೊಳ್ಳಲಾಗಿದೆ. ಒಡೆದು ಹಂಚಿಹೋಗಿರುವ ಕುಂಬಾರರಿಗೆ ಒಗ್ಗಟ್ಟಾಗಲು ಇರುವ ಒಂದೇ ಒಂದು ಉತ್ತಮ ಅವಕಾಶ ಇದು ಆಗಿದ್ದು. ಆ ದಿನ ಬೇರೆ ಯಾವುದೇ ಕಾರ್ಯಕ್ರಮ ಇಟ್ಟುಕೊಳ್ಳದೇ ಇಡೀ ಕುಂಬಾರ ಸಮುದಾಯದ ಒಟ್ಟಿಗೆ ನಿಲ್ಲುವಂತೆ ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ .