ಬೆಳ್ಮಣ್ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೆಳ್ಮಣ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂಡ ಗ್ರಾಮದಲ್ಲಿ ಹಾಗೂ ಉಡುಪಿ ನಗರಸಭಾ ವ್ಯಾಪ್ತಿಯ ಸಗ್ರಿಯಲ್ಲಿ ನದಿಯ ಪ್ರವಾಹದ ನೆರೆ ನೀರಿನಿಂದಾಗಿ ಎರಡು ಮನೆಗಳು ಧರಶಾಹಿಯಾದ ಘಟನೆ ಭಾನುವಾರ ನಡೆದಿದೆ.
ನಿರಂತರ ಸುರಿದ ಮಳೆಯಿಂದಾಗಿ ಸೂಡ ಗ್ರಾಮದಲ್ಲಿ ಹರಿಯುವ ಪಾಪನಾಶಿನಿ ನದಿಯು ತುಂಬಿ ಹರಿಯುತ್ತಿದ್ದು ನದಿ ತೀರದ ಬಹುತೇಕ ಕೃಷಿಭೂಮಿಗಳು ಜಲಾವೃತ್ತಗೊಂಡಿದೆ. ಸೂಡ ಕುಂಬ್ಳೆ ಭಾಗದ ಅಮ್ಮಣಿ ಮೂಲ್ಯ ಅವರ ಮನೆ ಸಂಪೂರ್ಣ ಧರಶಾಹಿಯಾಗಿದೆ. ಅಮ್ಮಣಿ ಮೂಲ್ಯರ ಮನೆ ಸಂಪೂರ್ಣ ಜಲಾವೃತ್ತಗೊಂಡು ಕುಸಿದ ಸಂದರ್ಭ ಅಗತ್ಯ ವಸ್ತುಗಳನ್ನು ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮಾಡಿದರು.
ಉಡುಪಿ ನಗರಸಭಾ ವ್ಯಾಪ್ತಿಯ ಸಗ್ರಿ ವಾರ್ಡಿನ ನಿವಾಸಿ ವಿಠ್ಠಲ ಮೂಲ್ಯ ಎಂಬುವವರ ಮನೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಕುಸಿದುಬಿದ್ದಿದ್ದು ಈ ಬಗ್ಗೆ ಶಾಸಕರಾದ ಕೆ ರಘುಪತಿ ಭಟ್ ರವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.