ಹೊಸದಿಲ್ಲಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕರಕುಶಲ ವಸ್ತುಗಳು ಭಾರತದ ಆರ್ಥಿಕತೆಯಲ್ಲಿ ಅಸಂಘಟಿತ ಕ್ಷೇತ್ರದ ಪ್ರಮುಖ ಭಾಗವಾಗಿದೆ. ಇವುಗಳಿಗೆ ಸಾಮಾನ್ಯವಾಗಿ ಹಸ್ತಚಾಲಿತ ಕೌಶಲ್ಯ ಬೇಕಾಗುತ್ತದೆ. ಇವುಗಳು ಸರಳ ಸಾಧನಗಳಿಂದ ತಯಾರಿಸಲಾಗುತ್ತದೆ ಮತ್ತು ಭಾರತೀಯ ಸಂಪ್ರದಾಯವನ್ನು ಕೆಲವು ರೀತಿಯಲ್ಲಿ ಅಥವಾ ರೂಪದಲ್ಲಿ ಪ್ರತಿನಿಧಿಸುತ್ತದೆ. ಅಂತಹ ಕರಕುಶಲ ವಸ್ತುಗಳಲ್ಲಿ ಮಣ್ಣಿನ ಕಪ್( ಕುಲ್ಲಡ್) ಕೂಡ ಒಂದು.
ಪ್ರಸ್ತುತ ಪ್ಲಾಸ್ಟಿಕ್ ಹಾಗೂ ಕಾಗದದ ಕಪ್ ಗಳಿಗೆ ಬೇಡಿಕೆ ಕುಸಿಯುತ್ತಿದ್ದು, ಚಹಾ ವಿತರಣೆಗಾಗಿ ಮಣ್ಣಿನ ಕಪ್( ಕುಲ್ಲಡ್) ಗಳಿಗೆ ಬೇಡಿಕೆ ಗಣನೀಯವಾಗಿ ಏರಿದೆ. ಸರ್ಕಾರವು ಮಣ್ಣಿನ ಕಪ್( ಕುಲ್ಲಡ್) ಉತ್ತೇಜನ ನೀಡುವ ದೃಷ್ಟಿಯಿಂದ ಇಲೆಕ್ಟ್ರಿಕ್ ಚಕ್ರಗಳ ಹಂಚಿಕೆ ಮಾಡುವ ಗುರಿ ಹೊಂದಿದೆ. ಕುಂಬಾರ ವೃತ್ತಿಯಲ್ಲಿ ತೊಡಗುವವರಿಗೆ ನೆರವಾಗುವ ದೃಷ್ಟಿಯಿಂದ ಕುಂಬಾರರ ಸಬಲೀಕರಣ ಯೋಜನೆಯನ್ನು ಪ್ರಾರಂಭಿಸಿದೆ.
ಕುಂಬಾರರ ಸಬಲೀಕರಣ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದು ಉಪಕ್ರಮವಾಗಿದ್ದು, ಕುಂಬಾರ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಉಪಕ್ರಮದ ಅಡಿಯಲ್ಲಿ ಕುಂಬಾರ ವೃತ್ತಿಯಲ್ಲಿ ತೊಡಗಿರುವವರು ಇಲೆಕ್ಟ್ರಿಕ್ ಚಕ್ರದ ಸಹಾಯದಿಂದ ಮಣ್ಣಿನ ಕಪ್ ತಯಾರಿಸಬಹುದಾಗಿದೆ. ಬಳಿಕ ಸರ್ಕಾರವೇ ಈ ಮಣ್ಣಿನ ಕಪ್ ಗಳನ್ನು ಉತ್ತಮ ಬೆಲೆಗೆ ಖರೀದಿಸಲಿದೆ.
ಖಾದಿ ಗ್ರಾಮೋದ್ಯೋಗ ಆಯೋಗದ ಚೇರ್ಮನ್ ವಿನಯ್ ಕುಮಾರ್ ಸಕ್ಸೇನಾ ಈ ಕುರಿತು ಮಾಹಿತಿ ನೀಡಿದ್ದು , ಕುಂಬಾರ ವೃತ್ತಿಯಲ್ಲಿ ತೊಡಗುವವರಿಗೆ ಈ ವರ್ಷ ಸರ್ಕಾರ 25 ಸಾವಿರ ಇಲೆಕ್ಟ್ರಿಕ್ ಚಕ್ರಗಳ ಹಂಚಿಕೆ ಮಾಡುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ಈ ಯೋಜನೆಯ ಅಡಿಯಲ್ಲಿ ವ್ಯಾಪಾರ ಪ್ರಾರಂಭಿಸಲು ಬಯಸುವವರು ಕೇವಲ ರೂ.5000 ಬಂಡವಾಳ ಹೂಡಿ ಉತ್ತಮ ಆದಾಯ ಗಳಿಸಬಹುದಾಗಿದೆ.
ಆದಾಯ ಎಷ್ಟು ಗಳಿಸಬಹುದು ?
ಪ್ರತಿ ಚಹಾ ಕಪ್ ಗಳ ಬೆಲೆ ಪ್ರತಿ ಶೇಕಡಾ 50 ರೂ. ಆಗಿದ್ದರೆ, ಲಸ್ಸಿ ಕಪ್ ನ ಬೆಲೆ ಪ್ರತಿ ಶೇಕಡಾ ರೂ.150 ಗಳಾಗಿದೆ. ಹಾಲಿನ ಕಪ್ ನ ಬೆಲೆ ಪ್ರತಿ ಶೇಕಡಾ ರೂ.150 ಆಗಿದ್ದರೆ. ಮಣ್ಣಿನ ಗ್ಲಾಸ್ ಬೆಲೆ ಪ್ರತಿ ಶೇ. ರೂ.100 ಆಗಿರಲಿದೆ. ಬೇಡಿಕೆ ಹೆಚ್ಚಳವಾದಾಗ ಇನ್ನೂ ಉತ್ತಮ ಬೆಲೆ ಕೂಡ ಸಿಗಲಿದೆ.
ಮಣ್ಣಿನ ಕಪ್ ಜೊತೆಗೆ ಚಹಾ ವ್ಯಾಪಾರ
ಮಣ್ಣಿನ ಕಪ್ ಗಳನ್ನು ಮಾರಾಟ ಮಾಡುವ ಜೊತೆಗೆ ನೀವು ಕುಲ್ಲಡ್ ಚಹಾ ಹಾಗೂ ಕುಲ್ಲಡ್ ಹಾಲಿನ ವ್ಯಾಪಾರ ಕೂಡ ಮಾಡಬಹುದಾಗಿದೆ. ಈ ವ್ಯಾಪಾರವನ್ನು ಕೂಡ ನೀವು ಕೇವಲ ರೂ.5000 ಯಲ್ಲಿ ಆರಂಭಿಸಬಹುದು. ನಗರಗಳಲ್ಲಿ ಒಂದು ಕಪ್ ಕುಲ್ಲಡ್ ಚಹಾ ಬೆಲೆ ರೂ.15 ರಿಂದ ರೂ.20 ಇದೆ. ಕುಲ್ಲಡ್ ಚಹಾ ವ್ಯಾಪಾರದಲ್ಲಿ ನಿತ್ಯವೂ 1000 ರೂ. ಉಳಿತಾಯ ಮಾಡಬಹುದಾಗಿದೆ.
ಮಣ್ಣಿನ ಕಪ್ ಜೊತೆಗೆ ಹಾಲಿನ ವ್ಯಾಪಾರ
ಮಣ್ಣಿನ ಕಪ್ ನಲ್ಲಿ 200 ಮಿಲಿ ಹಾಲಿನ ಬೆಲೆ ರೂ.20 ರಿಂದ ರೂ.30 ರಷ್ಟಿದೆ. 1 ಲೀಟರ್ ಹಾಲಿನ ಮಾರಾಟವಾದರೆ ನಿಮಗೆ ಕನಿಷ್ಠ ಅಂದರೂ ರೂ 30 ಉಳಿತಾಯವಾಗಲಿದೆ. ಒಂದು ದಿನದಲ್ಲಿ ನೀವು 500 ಲೀಟರ್ ಹಾಲಿನ ಮಾರಾಟ ಮಾಡಿದರೆ, ನಿಮಗೆ ಪ್ರತಿದಿನ 1500 ರೂ.ವರೆಗೆ ಉಳಿತಾಯವಾಗಲಿದೆ. ಅಂದರೆ ತಿಂಗಳಿಗೆ ಸುಮಾರು 45 ಸಾವಿರದಿಂದ 50 ಸಾವಿರವರೆಗೆ ಆದಾಯ ದೊರಕಲಿದೆ. ಆದರೆ ಆರ್ಥಿಕವಾಗಿ ಕಂಗೆಟ್ಟ ಜನ ಸಾಮಾನ್ಯರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.