ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ನನ್ಯ ದಂಡನಾಯಕ ಶ್ರೀ ಉಳ್ಳಾಕುಲು ದೈವದ ಪಲ್ಲಕ್ಕಿ ಹೊರುವ ಪಾರಂಪರ್ಯ ಕಾರ್ಯವನ್ನು ಮಾಡುತ್ತಿದ್ದ ಮದ್ಲ ನಿವಾಸಿ ಆನಂದ ಮೂಲ್ಯ (57) ಸೆ.೪ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೆನೋವು ಕಾಣಿಸಿಕೊಂಡಿದ್ದ ಆನಂದ ಮೂಲ್ಯರವರು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.
ಆನಂದ ಮೂಲ್ಯರವರು ಹಿಂದೆ ಪಾರಂಪರಿಕ ಕುಂಬಾರ ವೃತ್ತಿಯನ್ನು ನಡೆಸಿ ಜೀವನ ಮಾಡುತ್ತಿದ್ದರು. ಕಳೆದ ಐದು ವರ್ಷದಿಂದ ಕುಂಬಾರ ವೃತ್ತಿಯನ್ನು ಬಿಟ್ಟು ಮದ್ಲದಲ್ಲಿ ಅಂಗಡಿ, ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಮದ್ಲ ಸುಬ್ರಾಯ ಬಲ್ಯಾಯರವರು 2011ರಲ್ಲಿ ತುಡರ್ ಯುವಕ ಮಂಡಲವನ್ನು ಸ್ಥಾಪನೆ ಮಾಡಿದಾಗ ಯುವಕ ಮಂಡಲದಲ್ಲಿ ಆರಂಭಿಕ ಸದಸ್ಯರಾಗಿ ಸೇರಿ ಕಳೆದ ಹತ್ತು ವರ್ಷದಲ್ಲಿ ಗೌರವ ಸಲಹೆಗಾರರಾಗಿ, ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಯುವಕ ಮಂಡಲದ ಎಲ್ಲಾ ಸಮಾಜಮುಖಿ ಕಾರ್ಯಕ್ಕೂ ತನ್ನದೇ ಆದ ಸಹಕಾರವನ್ನು ನೀಡಿ ಯುವಕರಿಗೆ ಸ್ಫೂರ್ತಿಯಾಗಿದ್ದರು. ಮದ್ಲ ಸುಬ್ರಾಯ ಬಲ್ಯಾಯರು ನನ್ಯ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾಗಿದ್ದ ವೇಳೆ ಆನಂದ ಮೂಲ್ಯರವರು ಎಸ್ಡಿಎಂಸಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಲಲಿತಾ, ಪುತ್ರ ವಿದೇಶದಲ್ಲಿ ಉದ್ಯೋಗದಲ್ಲಿರುವ ಅಜಿತ್, ಪುತ್ರಿ ಅಶ್ವಿತಾರವರನ್ನು ಅಗಲಿದ್ದಾರೆ.
———————————————————————————————————-
ಶೋಭಾ ಸುಧಾಕರ ಬಂಗೇರ
ಮುಂಬಯಿಯ ಉದ್ಯಮಿ, ಸಮಾಜಸೇವಕ ಸುಧಾಕರ ಕೆ ಬಂಗೇರ ಅವರ ಪತ್ನಿ, ಬೊರಿವಿಲಿ ಪಶ್ಚಿಮ ನಿವಾಸಿ ಶೋಭಾ ಬಂಗೇರ (50) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ 1ರಂದು ನಿಧನರಾದರು. ಮೂಲತಃ ಕಾರ್ಕಳ ಕೆರ್ವಾಶೆಯವರಾದ ಶೋಬಾ ಅವರು ಬಿಎ ಪದವೀಧರರಾಗಿದ್ದು, ಮನೆವಾರ್ತೆ ನೋಡಿಕೊಂಡಿದ್ದರು. ಇವರು ಪತಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.