ವಿಟ್ಲ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ 611 (98%) ಅಂಕ ಪಡೆದಿರುವ ಪ್ರತೀಕಾ ಸೂರಿಕುಮೇರು ಇವರನ್ನು ಅಮೂಲ್ಯ ಕ್ಲೇ ಆರ್ಟ್ ಗ್ಯಾಲರಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಿ. ನಾರಾಯಣ ಕುಲಾಲ್ ದಂಪತಿ, ಧಾರ್ಮಿಕ ದತ್ತಿ ಪರಿಷತ್ತಿನ ಸದಸ್ಯರಾದ ಸೂರ್ಯ ಭಟ್ ಕಶೆಕೋಡಿ, ಮಾಣಿ ಕುಲಾಲ ಸೇವಾ ಸಂಘದ ಗೌರವಾದ್ಯಕ್ಷರಾದ ರಾಮಚಂದ್ರ ಮಾಸ್ತರ್ ಇತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

