ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ನಾಲ್ಕು ವರ್ಷಗಳ ಹಿಂದೆ ರಸ್ತೆ ಅಪಘಾತದಿಂದ ಮೃತಪಟ್ಟ ಸುಹಾನ್ ಕುಲಾಲ್ ಅವರ ಸ್ಮರಣಾರ್ಥವಾಗಿ ಅರಿಯಡ್ಕ ಗ್ರಾಮ ಪಂಚಾಯತ್ ನ ಅನುದಾನದಲ್ಲಿ ಕುಲಾಲ ವೇದಿಕೆ ಕೌಡಿಚ್ಚಾರು ಇದರ ಸಹಕಾರದಿಂದ ನಿರ್ಮಿಸಲ್ಪಟ್ಟ ನೂತನ ಬಸ್ ತಂಗುದಾಣ ಆಗಸ್ಟ್ 22 ರಂದು ಲೋಕಾರ್ಪಣೆಗೊಂಡಿತು.
ನೂತನವಾಗಿ ನಿರ್ಮಾಣವಾದ ಬಸ್ ತಂಗುದಾಣವನ್ನು ಸುಹಾನ್ ಅವರ ತಂದೆ ನಾರಾಯಣ ಮೂಲ್ಯ ಅವರು ರಿಬ್ಬನ್ ಕತ್ತರಿಸುವ ಮೂಲಕ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಕೃಷ್ಣ ಬೋರ್ಕರ್ ದೀಪ ಬೆಳಗಿಸಿ ಉಧ್ಘಾಟಿಸಿದರು .
ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸುರೇಶ್ ಕುಮಾರ್, ತಾಲೂಕು ಕುಲಾಲ ಸೇವಾ ಸಮಾಜದ ಅಧ್ಯಕ್ಷರಾದ ಕೃಷ್ಣಪ್ಪ ಫಾರೆಸ್ಟರ್, ವೆಂಕಪ್ಪ ಕುಲಾಲ್ ಕಾವು, ಕುಂಬ್ರ ಸಿಎ ಬ್ಯಾಂಕ್ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಾಯ, ಅರಿಯಡ್ಕ ಪಿಡಿಓ ಪದ್ಮಕುಮಾರಿ ಹಾಗೂ ಶಿವಣ್ಣ ಗೌಡ ಮಾಯಿಲಕೊಚ್ಚಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ತಿಲಕ್ ರೈ ಸ್ವಾಗತಿಸಿ, ಪಿಡಿಓ ಪದ್ಮಾಕುಮಾರಿ ವಂದಿಸಿದರು. ಅತಿಥಿಗಳಿಗೆ ಸಂತೋಷ್ ಕುಲಾಲ್ ,ವಸಂತ್ ಕುಲಾಲ್, ಪ್ರೇಮಲತಾ ,ಸುಮನ್ ಹಾಗೂ ವೆಂಕಪ್ಪ ಕುಲಾಲ್ ರವರು ಹೂ ನೀಡಿ ಗೌರವಿಸಿದರು.
ಕಾರ್ಯಕ್ರಮದ ಕುರಿತು ಅತಿಥಿಗಳು ಸುಹಾನ್ ಕುಲಾಲ್ ಅವರು ಅಪಘಾತಕ್ಕೀಡಾಗಿ ನಾಲ್ಕು ವರ್ಷ ಕಳೆದ ನೆನಪನ್ನು ಮತ್ತೆ ನೆನಪಿಸಿಕೊಂಡರು. ಅರಿಯಡ್ಕ ಪಂಚಾಯತ್ ಅನುದಾನ, ಕುಲಾಲ್ ವೇದಿಕೆಯ ಸಹಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಉಧ್ಘಾಟನಾ ಸಮಾರಂಭದಲ್ಲಿ ಕುಲಾಲ ವೇದಿಕೆಯ ಪದಾಧಿಕಾರಿಗಳು, ಗ್ರಾಮಪಂಚಾಯತ್ ಸದಸ್ಯರುಗಳಾದ ಸಂತೋಷ್ ಮಣಿಯಾಣಿ,ಅಮೃತ, ಪ್ರೇಮಲತಾ, ಗುತ್ತಿಗೆದಾರ ಲೋಕೆಶ್ ರೈ ಅಮೈ, ಹರೀಶ್ ರೈ ಜಾರತ್ತಾರು, ಸಚಿನ್ ರೈ ಪಾಪೆಮಜಲು, ರಿಕ್ಷಾ ಚಾಲಕ-ಮಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.