ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೆಂಗಳೂರು; ಕೊರೋನಾ ಆತಂಕದ ನಡುವೆ ನಡೆಸಲಾಗಿದ್ದ 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಫಲಿತಾಂಶ ಬಿಡುಗಡೆ ಮಾಡಿದ್ದು, ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಈ ಬಾರಿ ಆರು ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದು, ಇವರಲ್ಲಿ ಕುಂಬಾರ ಸಮಾಜದ ಚಿರಾಯು ಕೆ ಎಸ್ ಅವರೂ ಸೇರಿದ್ದಾರೆ. ಬೆಂಗಳೂರಿನ ನಾಗಸಂಧ್ರದ ಸೆಂಟ್ ಮೇರಿಸ್ ಹೈಸ್ಕೂಲ್ನ ವಿದ್ಯಾರ್ಥಿಯಾಗಿರುವ ಚಿರಾಯು ಕೆ ಎಸ್ ಅವರು ಮೂಲತಃ ಕೊಪ್ಪ ತಾಲ್ಲೂಕಿನವರಾಗಿದ್ದು, ಪ್ರಸ್ತುತ ಬೆಂಗಳೂರಿನ ದಾಸರಹಳ್ಳಿ ಚಿಕ್ಕಬಿದರುಕಲ್ಲಿನಲ್ಲಿ ನೆಲೆಸಿರುವ ಶಂಕರನಾರಾಯಣ ಕುಂಬಾರ್ ಮತ್ತು ಕವಿತಾ ಕುಂಬಾರ್ ದಂಪತಿಯ ಸುಪುತ್ರ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಂದರ್ಭದಲ್ಲಿ ತನ್ನ ತಂದೆ ತಾಯಿ ಮಾರ್ಗದರ್ಶನ ಶಿಕ್ಷಕ ವೃಂದದ ಮಾರ್ಗದರ್ಶನ ಬಗ್ಗೆ ಚಿರಾಯು ಸಂತಸ ಹಂಚಿಕೊಂಡರು.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ : ಕುಂಬಾರ ಸಮಾಜದ ಚಿರಾಯು ರಾಜ್ಯಕ್ಕೆ ಟಾಪರ್
Kulal news
1 Min Read