ಗುರುಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ಆಶ್ರಯದಲ್ಲಿ ‘ಜೀವನಮುಖಿ’ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಮಳಲಿಯ ಮುತ್ತಪ್ಪ ಮೂಲ್ಯರ ಮನೆಯಲ್ಲಿ ಮಣ್ಣಿನ ಮಡಿಕೆ ತಯಾರಿಸುವ ಕುರಿತು ಪ್ರಾತ್ಯಕ್ಷತೆ ಏರ್ಪಡಿಸಲಾಯಿತು.
ಮಡಿಕೆ ತಯಾರಿಸುವ ಕುರಿತು ದೊಂಬಯ್ಯ ಕುಲಾಲ್, ನವೀನ್, ಮೋನಪ್ಪ ಮೂಲ್ಯ, ಮುತ್ತಪ್ಪ, ರಾಮ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮೆಟ್ರೋ ಗೋಲ್ಡ್ ಅಧ್ಯಕ್ಷ ಕಾರಮೊಗರುಗುತ್ತು ಜಿ.ಕೆ ಹರಿಪ್ರಸಾದ್ ರೈ ಕುಲಕಸುಬುಗಳಿಗೆ ಸರಕಾರದಿಂದ ಸಿಗುವ ಸಾಲ, ಪಿಂಚಣಿ ಮೊದಲಾದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರಲ್ಲದೆ ಮಡಿಕೆ ಮಾರಾಟಕ್ಕೆ ಲಯನ್ಸ್ ಕ್ಲಬ್ ಉತ್ತೇಜನ ನೀಡಲಿದೆ ಎಂದರು.
ಸ್ಥಳೀಯ ಕೃಷಿಕ ಉಳಿಪಾಡಿಗುತ್ತು ಉದಯಕುಮಾರ್ ಆಳ್ವ, ಸುಚೇತ ಪೂಂಜ ಉಪಸ್ಥಿತರಿದ್ದರು. ಕ್ಲಬ್ನ ಕಾರ್ಯದರ್ಶಿ ನ್ಯಾಯವಾದಿ ಪದ್ಮನಾಭ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.