ಸುರತ್ಕಲ್(ಕುಲಾಲ ವರ್ಲ್ಡ್ ಡಾಟ್ ಕಾಮ್): ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಸಮಾಜದ ಸಾಧಕರನ್ನು ಕುಳಾಯಿ ಕುಲಾಲ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕುಳಾಯಿ ಕುಲಾಲ ಸಂಘದ ಅಧ್ಯಕ್ಷ ಗಂಗಾಧರ್ ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯರಾಗಿ ಆಯ್ಕೆಯಾದ ನಾಗೇಶ್ ಕುಲಾಲ್, ಕುಳಾಯಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಜಯಂತಿ ಕೆ, ಪದ್ಮನಾಭ ಮೈಂದಗುರಿ, ಗಣೇಶ್ ಎಸ್ ಕುಲಾಲ್ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ನಾಗೇಶ್ ಕುಲಾಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ತುಳು ಭಾಷೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ತುಳುನಾಡ ಆಚರಣೆ, ಸಂಸ್ಕೃತಿಯನ್ನು ಬೆಳೆಸುವಲ್ಲಿ ಸರ್ವರ ಸಹಕಾರ ಅಗತ್ಯವಿದೆ ಎಂದರು. ಮಾಜಿ ಅಧ್ಯಕ್ಷ ಜನಾರ್ಧನ ಸಾಲಿಯಾನ್ ಸನ್ಮಾನಿತರನ್ನು ಪರಿಚಯಿಸಿ ಅಭಿನಂದನಾ ಭಾಷಣ ಮಾಡಿದರು. ಅಪಘಾತಕ್ಕೀಡಾಗಿರುವ ಹೊಸಬೆಟ್ಟುವಿನ ಗಿರೀಶ್ ಕುಲಾಲ್ ಅವರ ವೈದ್ಯಕೀಯ ವೆಚ್ಚಕ್ಕೆ ರೂಪಾಯಿ 11, 500/= ನೀಡಿ ಸಹಕರಿಸಲಾಯಿತು. ಈ ಸಂದರ್ಭ ಗಣೇಶ್ ಕುಲಾಲ್ , ಜನಾರ್ಧನ ಸಾಲಿಯಾನ್, ರಮೇಶ್ ಆರ್ ಕೆ, ದೇವದಾಸ್ ಟೈಲರ್, ಹರೀಶ್ ಕಾವಿನಕಲ್ಲು, ಚೆನ್ನಪ್ಪ ಕುಲಾಲ್, ಬಾಳಪ್ಪ, ಯಾದವ್ ಬಿ ಎಂ, ಭಾಸ್ಕರ್ ಹೊಸಬೆಟ್ಟು, ಕುಲಾಲ
ಮಹಿಳಾ ಮಂಡಳಿ ಅಧ್ಯೆಕ್ಷೆ ಮೀರಾ ಮೋಹನ್, ಭಾರತಿ ಗಂಗಾಧರ್, ತಾರಾ ಚಂದ್ರಹಾಸ್, ರಾಜೀವಿ ಹರೀಶ್, ಶಶಿಕಲಾ ಮಾಧವ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಗಂಗಾಧರ್ ಬಂಜನ್ ಕಾರ್ಯಕ್ರಮ ನಿರೂಪಣೆ ಮಾಡಿದರು.