ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಕುಂಬಾರರ ಗುಡಿಕೈಗಾರಿಕಾ ಸಹಕಾರಿ ಸಂಘ ಮತ್ತು ಕುಲಾಲ ಕುಂಬಾರ ಯುವ ವೇದಿಕೆ ಬಂಟ್ವಾಳ ಜಂಟಿ ಆಶ್ರಯದಲ್ಲಿ ಆಹಾರ ಕಿಟ್ ವಿತರಣೆಗೆ ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪುರುಷ ಎನ್ ಸಾಲ್ಯಾನ್ ರವರಿಂದ ಚಾಲನೆ ನೀಡಲಾಯಿತು.
ಭಾಸ್ಕರ ಎಂ ಪೆರುವಾಯಿ, ಶೇಷಪ್ಪ ಕುಲಾಲ್ ನಿರ್ಮಲ್ ಬಿ.ಸಿ.ರೋಡ್ , ಶುಭ ಆನಂದ ಬಂಜನ್, ನಾರಾಯಣ ಮಾಣಿ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಜನಾರ್ದನ್ ಮೂಲ್ಯ ಸಾರ್ಯ, ಕಳ್ಳಿಗೆ ಗ್ರಾಮದ ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಕವಿರಾಜ ಚಂದ್ರಿಗೆ, ಯುವ ವೇದಿಕೆ ಮಾಜಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಚಂದ್ರಿಗೆ, ಪ್ರಶಾಂತ್ ಕನಪಾಡಿ, ಸಂದೇಷ್ ದೇವಂದಬೆಟ್ಟು, ಸುದೇಷ್ ದೇವಂದಬೆಟ್ಟು, ಶೇಖರ್ ಪೂಜಾರಿ , ರೂಪೇಶ್ ಜಾರಂದಗುಡ್ಡೆ ಮತ್ತಿತರರು.
ವಿವಿಧ ಸಮಾಜದ ಅಸಾಹಯಕ ಕುಟುಂಬಗಳಿಗೆ ಪುತ್ತೂರು ತಾಲೂಕಿನ ಪುತ್ತೂರು ಕಸಬ, ನರಿಮೊಗರು, ಒಳಮೊಗರು, ಆರಿಯಡ್ಕ, ಕೆಮ್ಮಿಂಜೆ, ಮಾಡ್ನೂರು ಅಂತೆಯೇ ಸುಳ್ಯ ತಾಲೂಕಿನ ಪೆರುವಾಜೆ, ಬೆಳ್ಳಾರೆ ಹಾಗೂ ಬೆಳ್ತಂಗಡಿ ತಾಲೂಕಿನ ಇಳಂತಿಲ ಹಾಗೂ ಕಡಬ ತಾಲೂಕಿನ ಚಾರ್ವಕ-ಕುದ್ಮಾರು ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ, ಪೆರುವಾಯಿ, ಕಳ್ಳಿಗೆ ಗ್ರಾಮಗಳಲ್ಲಿ ಮತ್ತು ಕುಂಬಾರಿಕೆ ಮಾಡುವ ಸದಸ್ಯ ಕುಶಲ ಕರ್ಮಿಗಳನ್ನು ಗುರುತಿಸಿ ಸತತ ಮುಂದಿನ ಮೂರು ದಿನಗಳ ಕಾಲ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಎಪ್ರಿಲ್ 19 ರಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಪುತ್ತೂರಿನಲ್ಲಿ ಚಾಲನೆ ನೀಡಿದ್ದರು.