ಬೆಳ್ಮಣ್(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ಲಾಕ್ ಡೌನ್ ನಿಂದ ಜನ ಸಾಮಾನ್ಯರ ಸಂಕಷ್ಟಕ್ಕೆ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯರವರ ದಕ್ಷ ನಾಯಕತ್ವದ ನೆರಳಲ್ಲಿ ಮನೆ ಮನೆಗೆ ತೆರಳಿ ಅಗತ್ಯ ವಸ್ತುಗಳ ಸುಮಾರು 130 ಕಿಟ್ ವಿತರಣೆಯನ್ನು ಮಾಡಲಾಯಿತು.
ಊರ ಪರ ಊರಿನ ಸಂಘದ ದಾನಿಗಳಿಂದ ಸಂಗ್ರಹ ವಾಗಿರುವ ಸುಮಾರು 1,300 ಕಿಲೋ ಅಕ್ಕಿ, 130 ಕಿಲೋ ಸಕ್ಕರೆ,130 ಕಿಲೋ ಟೊಮೇಟೊ ಹಾಗೂ 35 ಕಿಲೋ ಉಪ್ಪಿನಕಾಯಿ ದೇಣಿಗೆ ಸಂಗ್ರಹವಾಗಿತ್ತು. ಪ್ರತೀ ಕಿಟ್ ಒಂದರಲ್ಲಿ 10 ಕಿಲೋ ಅಕ್ಕಿ,1ಕಿಲೋ ಟೊಮೇಟೊ , 1 ಕಿಲೋ ಸಕ್ಕರೆ, ಹಾಗೂ ಉಪ್ಪಿನಕಾಯಿ ನೀಡಲಾಯಿತು.
ಕಿಟ್ ವಿತರಣೆ ಜವಾಬ್ದಾರಿಯನ್ನು ಜಯರಾಮ್ ಕುಲಾಲ್ ಅಗರಟ್ಟ ಹಾಗೂ ರಾಜೇಶ್ ಕುಲಾಲ್ ಸಾಂತೂರು ಯಶಸ್ವಿಯಾಗಿ ನಿರ್ವಹಿಸಿದರು. ರಜನಿ ಕಾಂತ್ ಇನ್ನಾ, ಜಗನ್ನಾಥ್ ಮೂಲ್ಯ ಬೆಳ್ಮಣ್, ನಾಗೇಶ್ ಕುಲಾಲ್ ಬೆಳ್ಮಣ್, ದೀಪಕ್ ಬೆಳ್ಮಣ್, ಆಶಾ ವರದರಾಜ್ ಕೋಡಿಮಾರ್, ಸೂರಜ್ ಸಾಲ್ಯಾನ್ ನಾನಿಲ್ತಾರ್, ಸುಧಾಕರ್ ಸಾಲ್ಯಾನ್ ಸಂಕಲಕರಿಯ, ಚೈತ್ರೆಶ್ ಇನ್ನಾ, ಸುಧಾಕರ್ ಕುಲಾಲ್ ಮುಂಡ್ಕೂರು, ಆನಂದ್ ಸಾಲ್ಯಾನ್ ಮುಂಡ್ಕೂರು, ಬೋಗ್ಗು ಮೂಲ್ಯ ಬೇಲಾಡಿ, ಪವನ್ ಮೂಲ್ಯ ಬೋಳ, ಗಜೇಂದ್ರ ಕುಲಾಲ್ ಇನ್ನಾ ಸಹಕರಿಸಿದರು.