ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಸಮುದಾಯದ ಬಡ ಕುಟುಂಬಗಳಿಗೆ ಕುಂಬಾರರ ಗುಡಿಕೈಗಾರಿಕಾ ಸಹಕಾರಿ ಸಂಘ ಮತ್ತು ಕುಲಾಲ ಕುಂಬಾರ ಯುವ ವೇದಿಕೆ ಪುತ್ತೂರು ಜಂಟಿ ಆಶ್ರಯದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ.
ತಾಲೂಕಿನ ಪುತ್ತೂರು ಕಸಬ, ನರಿಮೊಗರು, ಒಳಮೊಗರು, ಆರಿಯಡ್ಕ, ಕೆಮ್ಮಿಂಜೆ, ಮಾಡ್ನೂರು ಅಂತೆಯೇ ಸುಳ್ಯ ತಾಲೂಕಿನ ಪೆರುವಾಜೆ, ಬೆಳ್ಳಾರೆ ಹಾಗೂ ಬೆಳ್ತಂಗಡಿ ತಾಲೂಕಿನ ಇಳಂತಿಲ ಹಾಗೂ ಕಡಬ ತಾಲೂಕಿನ ಚಾರ್ವಕ-ಕುದ್ಮಾರು ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ, ಪೆರುವಾಯಿ, ಕಳ್ಳಿಗೆ ಗ್ರಾಮಗಳಲ್ಲಿ ಮತ್ತು ಕುಂಬಾರಿಕೆ ಮಾಡುವ ಸದಸ್ಯ ಕುಶಲ ಕರ್ಮಿಗಳನ್ನು ಗುರುತಿಸಿ ಸತತ ಮುಂದಿನ ಮೂರು ದಿನಗಳ ಕಾಲ ಕಿಟ್ ವಿತರಣೆ ನಡೆಯಲಿದೆ.
ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ, ಉಪಾಧ್ಯಕ್ಷ ದಾಮೋದರ, ನಿರ್ದೇಶಕರುಗಳಾದ ಗಣೇಶ್, ಶಿವಪ್ಪ ಮೂಲ್ಯ ಕೌಡಿಚಾರು, ಶುಭ ಆನಂದ ಬಂಜನ್, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಜನಾರ್ದನ್ ಮೂಲ್ಯ ಸಾರ್ಯ, ಮಾಜಿ ಉಪಾಧ್ಯಕ್ಷ ಸಚ್ಚಿದಾನಂದ, ಕುಲಾಲ ಯುವವೇದಿಕೆ ಅಧ್ಯಕ್ಷ ನವೀನ್ ಕುಲಾಲ್ , ಬಾಬು ಕುಲಾಲ್ ಬಲ್ನಾಡು, ಚಂದ್ರಹಾಸ ಪದವು, ಡಾ.ಚಂದ್ರಶೇಖರ್ ಉಪನ್ಯಾಸಕರು, ವಸಂತ ಸೂತ್ರಬೆಟ್ಟು, ದೀಪಕ್ ಬೆಳ್ವಾರು, ಗೋಪಾಲಕೃಷ್ಣ ರೇಂಜರ್, ಡಾ. ರಕ್ಷಿತ್ ಬಂಗೇರ, ಸಂತೋಷ್ ಕುಮಾರ್ ರೈ ನಳೀಲು, ನಿವೃತ್ತ ಹಿರಿಯ ಪಶು ವೈದ್ಯಕೀಯ ಚಿಕಿತ್ಸಕ ಧರ್ಣಪ್ಪ ಮೂಲ್ಯ ಮೊದಲಾದವರು ಕಿಟ್ ವಿತರಣೆ ಸಂದರ್ಭ ಉಪಸ್ಥಿತರಿದ್ದು ಸಹಕರಿಸಿದರು.