ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಹಲವು ದಶಕಗಳವರೆಗೆ ಮಡಿಕೆ ತಯಾರಿಸುವ ಸಾಂಪ್ರದಾಯಿಕ ಕಲೆಯನ್ನು ವೃತ್ತಿಯನ್ನಾಗಿಸಿ ಬದುಕು ಕಟ್ಟಿಕೊಂಡಿದ್ದ ಕುಂದಾಪುರ ಬವಲಾಡಿಯ ಶ್ರೀಮತಿ ಚಂದಮ್ಮ ಕುಲಾಲ್ (73) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ.೧೪ರಂದು ನಿಧನರಾದರು.
ಕೋಣ್ಕಿ ಅಣ್ಣಪ್ಪ ಕುಲಾಲ್ ಅವರನ್ನು ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಚಂದಮ್ಮ ಅವರು, ಚಿಕ್ಕದಿಂದಲ್ಲೇ ತನ್ನ ತಾಯಿ ಮೂಲಕ ಕುಂಬಾರಿಕೆ ವೃತ್ತಿಯನ್ನು ಕಲಿತು ಮಡಿಕೆ ಮಾಡಿ ಕುಂದಾಪುರ, ಬೈಂದೂರು ಸಂತೆಗಳಿಗೆ ಹಾಗೂ ಮನೆ ಮನೆಗಳಿಗೆ ತೆರಳಿ ವ್ಯಾಪಾರ ಮಾಡುತ್ತಾ ಸ್ವಾವಲಂಬಿ ಬದುಕು ನಡೆಸುತ್ತಾ ಮಕ್ಕಳನ್ನು ಕಷ್ಟದಿಂದಲೇ ಬೆಳೆಸಿದ್ದರು. ಇವರ ಇಬ್ಬರು ಪುತ್ರರು ಪೊಲೀಸ್ ಇಲಾಖೆಯಲ್ಲಿ ಹಾಗೂ ಪುತ್ರಿಯೊಬ್ಬರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಾ.೧೪ರಂದು ನಿಧನರಾದರು.
ಬೆಂಗಳೂರು ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಕುಲಾಲ್ ಜನ್ನಾಡಿ ಹಾಗೂ ಕುಲಾಲ ವರ್ಲ್ಡ್ ಡಾಟ್ ಕಾಮ್ ನ ವ್ಯವಸ್ಥಾಪಕ ಸಂಪಾದಕ ದಿನೇಶ್ ಬಂಗೇರ ಇರ್ವತ್ತೂರು ಅವರ ಅತ್ತೆಯಾಗಿರುವ ಇವರು ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ. ಇವರ ನಿಧನಕ್ಕೆ ಬೆಂಗಳೂರು ಕುಲಾಲ ಸಂಘ, ಕರಾವಳಿ ಕುಲಾಲ ಯುವ ವೇದಿಕೆ ಹಾಗೂ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಸಂತಾಪ ವ್ಯಕ್ತಪಡಿಸಿದೆ.