ಮುಂಬಯಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಂಘ ಮುಂಬಯಿ ಇದರ ಮೀರಾ ರೋಡ್-ವಿರಾರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದಿಂದ ಹಳದಿ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ನಲಸೋಪಾರ ಗ್ಯಾಲಕ್ಸಿ ಹೋಟೆಲ್ ಸಭಾಂಗಣದಲ್ಲಿ ಜರಗಿತು.

ಗುರುವಂದನಾ ಭಜನಾ ಮಂಡಳಿಯ ಚಂದ್ರಶೇಖರ ಕುಲಾಲ್ ಇವರ ನೇತೃತ್ವದಲ್ಲಿ ನಡೆದ ಭಜನಾ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಲವಿಕಾಸ್ ಅಗಾಡಿ ಇದರ ಅಧ್ಯಕ್ಷೆ ಮಾಯಾ ಚೌಧರಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಮುಖ್ಯ ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷೆ ಸುಚಿತಾ ಡಿ ಬಂಜನ್ ವಹಿಸಿದ್ದು, ವೇದಿಕೆಯಲ್ಲಿ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್, ಸಮಿತಿಯ ಅಧ್ಯಕ್ಷ ಸುಂದರ ಮೂಲ್ಯ, ಜಲಜಾಕ್ಷಿ ಗೋಪಾಲಕೃಷ್ಣ ಕುಂಬ್ಳೆ, ಡಿವೈನ್ ಪಾರ್ಕ್ ಮುಂಬಯಿ ಇದರ ವನಿತಾಧಿಕಾರಿ ಪುಷ್ಪಾ ಸುಂದರ್ ಮೂಲ್ಯ, ಪುಷ್ಪಾ ಎಸ್ ಮೂಲ್ಯ, ದೇವಕಿ ಸುನಿಲ್ ಸಾಲ್ಯಾನ್, ಚೇತನಾ ಕುಂದರ್, ತುಳಸಿ ಪದ್ಮನಾಭ ಬಂಗೇರ ಇವರು ಉಪಸ್ಥಿತರಿದ್ದರು.

ಸ್ಥಳೀಯ ಸಮಿತಿಯ ಅಧ್ಯಕ್ಷೆ ಗೀತಾ ಯೋಗೀಶ್ ಬಂಗೇರ, ಕಾರ್ಯಾಧ್ಯಕ್ಷೆ ರೇಣುಕಾ ಸುರೇಶ ಸಾಲ್ಯಾನ್, ಉಪಾಧ್ಯಕ್ಷೆ ಚಂದ್ರಾವತಿ ಸದಾನಂದ ಸಾಲ್ಯಾನ್, ಕೋಶಾಧಿಕಾರಿ ಸಾವಿತ್ರಿ ಸುರೇಂದ್ರ ಬಂಗೇರ, ಜಾವ್ಟ್ ಕಾರ್ಯದರ್ಶಿ ಪ್ರಮೀಳಾ ಮೋಹನ್ ಬಂಜನ್ ಮೊದಲಾದವರು ಯಶಸ್ವಿಗೊಳಿಸುವಲ್ಲಿ ಶ್ರಮಿಸಿದರು.




