ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಅವನು ಲತೀಶ್ ಯಾನೆ ಲಕ್ಷ್ಮಣ ಮೂಲ್ಯ ಎಂಬ ಹೆಸರಿನ ಇಪ್ಪತ್ತೆಂಟರ ಹರೆಯದ ತರುಣ. ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಮಜಿಬೈಲುಮನೆ ನಿವಾಸಿ. ತಂದೆ ಇಲ್ಲದ ಮನೆಗೆ ಇವನೇ ಆಧಾರ. ತಾನಾಯ್ತು ತನ್ನ ಕೆಲಸವಾಯ್ತು ಎಂಬಂತಿದ್ದ ಸಮಾಜದ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯನಾಗಿದ್ದ ಲಕ್ಷ್ಮಣ ಮೂಲ್ಯ ಮಂಗಳೂರಿನ ಮೆಲ್ಕಾರ್ ಎಂಬಲ್ಲಿ ಅಚಾನಕ್ಕಾಗಿ ಜರುಗಿದ ಬೈಕ್ ಸ್ಕಿಡ್ ಅವಘಡಕ್ಕೆ ತುತ್ತಾಗಿದ್ದು ದುರಂತ. ಬೈಕ್ ಡ್ರೈವ್ ಮಾಡುತ್ತಿದ್ದ ಕಾರಣ ತೀವ್ರ ತೆರನಾದ ಗಾಯ ತಲೆಗೆ ಆಗಿತ್ತು. ತುರ್ತಾಗಿ ಮಂಗಳೂರಿನ ‘ಫಸ್ಟ್ ನ್ಯೂರೋ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ಸುಮಾರು ಐದು ಲಕ್ಷ ಹಣವನ್ನು ವ್ಯಯಿಸಿ ಚಿಕಿತ್ಸೆಯನ್ನು ಪಡೆದು ಮನೆಗೆ ಮರಳಿದರು.
ಆದರೆ ಲಕ್ಷ್ಮಣ ಮೂಲ್ಯ ಅವರು ತಲೆಗೆ ಬಿದ್ದ ತೀವ್ರ ಪೆಟ್ಟಿನ ಪರಿಣಾಮ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದು ಇದು ಮರಳಲು ಇನ್ನೂ ಉನ್ನತಮಟ್ಟದ ಚಿಕಿತ್ಸೆ ಮತ್ತು ಸಮಯ ಬೇಕು ಎಂಬುದು ವೈದ್ಯರ ಸಲಹೆ. ತಂದೆ ಇಲ್ಲದ ಕುಟುಂಬಕ್ಕೆ ಆಧಾರವಾಗಿದ್ದ ಮಗನೇ ಈ ಸ್ಥಿತಿ ತಲುಪಿದಾಗ ದಿಕ್ಕುಗಾಣದ ತಾಯಿ ಜಲಜ ಅವರು ಸಂಬಂಧಿಕರಲ್ಲಿ ಆತ್ಮೀಯರಲ್ಲಿ ಈಗಾಗಲೇ ಲಕ್ಷಾಂತರ ರೂ ಸಾಲವನ್ನು ಮಾಡಿದ್ದು ಮಗನ ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಕೈ ಚೆಲ್ಲಿ ಕುಳಿತಿದ್ದಾರೆ.. ನನ್ನ ಮಗನ ಚಿಕಿತ್ಸೆಗೆ ಸಮುದಾಯ ಬಂಧು ಗಳಾದ ತಾವು ಸಹಕಾರ ನೀಡುವಿರಾ ಎಂದು ಕುಲಾಲ್ ವರ್ಲ್ಡ್ ಡಾಟ್ ಕಾಮ್ ಗೆ ಮನವಿಯನ್ನು ಅರ್ಪಿಸಿ ನೆರವಿನ ನೀರಿಕ್ಷೆಯಲ್ಲಿ ಕಾಯುತ್ತಿದ್ದಾರೆ.
ಭಗವಂತ ಮೆಚ್ಚುವ ಕೆಲಸಗಳಲ್ಲಿ ಮುಂಚೂಣಿಯಲ್ಲಿ ಇರುವುದು ಇಂತಹ ಬಡರೋಗಿಗಳಿಗೆ ನೆರವಿನ ಸಹಕಾರ ನೀಡುವುದು. ಈ ನೆಲೆಯಲ್ಲಿ ಬಾಳಿ ಬದುಕಬೇಕಾದ ಈ ತರುಣನ ಚಿಕಿತ್ಸಾ ವೆಚ್ಚಕ್ಕೆ ಸಹಯವನ್ನು ತಾವು ಒದಗಿಸಬೇಕು ಎಂಬ ಕಳಕಳಿಯ ಮನವಿ ಕುಲಾಲ್ ವರ್ಲ್ಡ್ ನದ್ದು. ನೀವು ನೀಡಿದ ಸಹಾಯದ ಮೊತ್ತವನ್ನು ಒಟ್ಟುಗೂಡಿಸಿ ತರುಣನ ಕೈಗಳಿಗೆ ತಲುಪಿಸುವ ಜವಬ್ದಾರಿಯನ್ನು ಕುಲಾಲ್ ವರ್ಲ್ಡ್ ಜತನದಿಂದ ಮಾಡುತ್ತದೆ.. ನೆರವಿನ ಸಹಕಾರವನ್ನು ಯಾಚಿಸುತ್ತದೆ.
ಬ್ಯಾಂಕ್ ಖಾತೆ ವಿವರ:
NAME: Mrs. Jalaja w/o late. Kanthappa moolya
Bank: Karnataka Bank
A/c : 0712500101864701
IFSC: KARB0000071
Contact: Divakar(Bhava) 7353921845