ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಅವನು ನಾಲ್ಕರ ಹೆರೆಯದ ಮುದ್ದು ಕಂದಮ್ಮ..ಪುಟ್ಟ ಪುಟ್ಟ ಹೆಜ್ಜೆ ಇಡ್ತಾ ಅಮ್ಮನ ಕೈಯಿಡಿದು ಅಂಗನವಾಡಿಗೆ ತೆರಳುತ್ತಿದ್ದ ಪುಟ್ಟ ಪೋರ.. ಮುದ್ದು ಮಗುವಿನ ಲಾಲನೆ-ಪೋಷಣೆಯಲ್ಲಿ ಮಾತೃತ್ವದ ಖುಷಿ ಕಾಣುತ್ತಿದ್ದ ಆ ಬಡಕುಟುಂಬದ ಖುಷಿಯನ್ನು ಆ ದೇವರಿಗೆ ಸಹಿಸಲಾಗಲಿಲ್ವೇನೋ? ಅಚಾನಕ್ಕಾಗಿ ಆರೋಗ್ಯ ಸಮಸ್ಯೆ ಕಂದಮ್ಮನನ್ನು ಕಾಡಿದಾಗ ಆಸ್ಪತ್ರೆಗೆ ತೆರಳಿದ ಪರೀಕ್ಷಿಸಿದ ವೈದ್ಯರಿಂದ ಬಂದ ಉತ್ತರ..’ನಿಮ್ಮ ಮಗುವಿಗೆ ಬ್ಲಡ್ ಕ್ಯಾನ್ಸರ್.!!
ಮಂಜೇಶ್ವರ ತಾಲೂಕಿನ ಪೈವಳಿಕೆ ಪಂಚಾಯತಿಯ ಕನಿಯಾಲ ನಿವಾಸಿಗಳಾದ ಹರೀಶ್ ಕುಲಾಲ್ ಮತ್ತು ರಂಜಿತಾ ದಂಪತಿಗಳ ಕರುಳಕುಡಿ ಹಾರ್ದಿಕ್ ಕುಲಾಲ್ ಕ್ಯಾನ್ಸ ರ್ ನಿಂದ ನರಳುತ್ತಿರುವ ನತದೃಷ್ಟ ಬಾಲಕ.
ಸೆಂಟ್ರಿಂಗ್ ಕೆಲಸಕ್ಕೆ ದಿನಗೂಲಿ ನೌಕರನಾಗಿ ದುಡಿಯುವ ಅಪ್ಪ, ಗೃಹಿಣಿಯಾಗಿರುವ ಅಮ್ಮ..ಕರುಳ ಕುಡಿ ಕ್ಯಾನ್ಸರ್ ಮಹಾಮಾರಿಗೆ ತುತ್ತಾದಾಗ ಕಣ್ಣೀರ ಕೋಡಿ ದಂಪತಿಗಳ ಕಂಗಳಿಂದ ಹರಿದಿತ್ತು. ಆದರೆ ಮಗುವನ್ನು ಉಳಿಸಿಕೊಳ್ಳಲೇ ಬೇಕು ಎಂಬ ತುಡಿತದಲ್ಲಿ ಮಂಗಳೂರಿನ ಅತ್ತಾವರ ಕೆ.ಎಂ.ಸಿಯ ಆಸ್ಪತ್ರೆಯ ಬಾಗಿಲು ಬಡಿದರು. ಮಗುವಿಗೆ ಉನ್ನತ ಮಟ್ಟದ ಚಿಕಿತ್ಸೆ ಕೊಡಿಸಬೇಕಾದರೆ ಅಂದಾಜು ಎಂಟು ಲಕ್ಷಕ್ಕೂ ಜಾಸ್ತಿ ಖರ್ಚಾಗಬಹುದು ಎಂಬ ವೈದ್ಯರ ಮಾತಿಗೆ ಬೇರೆ ದಾರಿ ಕಾಣದ ಈ ಬಡ ಕುಟುಂಬ ಸಮಾಜದ ಸಜ್ಜನ ದಾನಿಗಳಾದ ನಿಮ್ಮ ಮುಂದೆ ಕೈ ಚಾಚಿ ನಿಂತಿದೆ.
ಕೂಲಿ ಕೆಲಸಮಾಡಿ ಬದುಕುವ ಈ ಕುಟುಂಬದ ಕಣ್ಣೀರಿಗೆ, ಇನ್ನೂ ಬಾಳಿ ಬದುಕಬೇಕಾದ ಕಂದಮ್ಮನ ಚಿಕಿತ್ಸಾ ವೆಚ್ಚಗೆ ನೆರವಿನ ಸಹಾಯಹಸ್ತ ಚಾಚುವ ಗಟ್ಟಿ ಮನಸ್ಸನ್ನು ಕುಲಾಲ ವರ್ಲ್ಡ್. ಕಾಮ್ ಮಾಡಿದೆ. ಈ ಹಿಂದೆ ಅನೇಕರಿಗೆ ನೆರವಿನ ಹಸ್ತ ಚಾಚುವ ಮನವಿ ಒಡ್ಡಿದಾದ ಸ್ಪಂದಿಸಿದ ಕೈಗಳು ಮಗದೊಮ್ಮೆ ಪುಟ್ಟ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಕಿಂಚಿತ್ ದನ ಸಹಾಯ ಮಾಡಿ ಎಂಬ ಮನವಿ ನಮ್ಮದು.. ಹನಿ ಹನಿ ಸೇರಿ ಹಳ್ಳ ಎಂಬಂತೆ ನೀವು ನೀಡಿದ ಮೊತ್ತವನ್ನು ಒಟ್ಟುಗೂಡಿಸಿ ಮಗುವಿನ ಪಾಲಕರಿಗೆ ನೀಡುವ ಜವಬ್ದಾರಿಯನ್ನು `ಕುಲಾಲ್ ವರ್ಲ್ಡ್’ ಮಾಡಲಿದೆ..
ಮಗು ದೇವರ ಸಮಾನ.. ಮಗುವಿಗೆ ನೀವು ನೀಡುವ ಪುಟ್ಟ ಮೊತ್ತ ದೇವರ ಹುಂಡಿಗೆ ಹಾಕಿದ ಕಾಣಿಕೆ ಎಂದೇ ಬಾವಿಸಿ.. ಪುಣ್ಯಕಾಯಕ ನಿಮ್ಮದಾಗಲಿ.. ಮಗುವಿಗೆ ನೆರವಾಗುವಿರಾ..ಪ್ಲೀಸ್..
ಬ್ಯಾಂಕ್ ಖಾತೆ ವಿವರ:
Name.. Ranjitha (hardhik Mother)
Vijaya Bank
A/c no : 200201011004324
IFSC Code: VIJB0002002
Harish : 9496190815