ಪುಣೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕುಲಾಲ ಸುಧಾರಕ ಸಂಘ ಪುಣೆ ಇದರ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾತ್ರಜ್ನ ವಂಡರ್ಸಿಟಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಪರಾಹ್ನ ಜರಗಿತು.

ಮಹಿಳಾ ವಿಭಾಗದ ಶಾರದಾ ಕೆ. ಮೂಲ್ಯ, ಸರಸ್ವತಿ ಕುಲಾಲ್ , ಸುಜಾತಾ ಕುಲಾಲ್, ಅನಿತಾ ಕೊಡ್ಮಾಣ್ ಕರ್, ಸಂಘದ ಅಧ್ಯಕ್ಷ ಹರೀಶ್ ಕುಲಾಲ್, ದೊಡ್ಡಣ್ಣ ಮೂಲ್ಯ, ರಮೇಶ್ ಕೊಡ್ಮಾಣ್ ಕರ್, ಮನೋಜ್ ಸಾಲ್ಯಾನ್, ವಾಸು ಕುಲಾಲ್, ಸದಾಶಿವ ಮೂಲ್ಯ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪರಸ್ಪರ ಅರಸಿನ ಕುಂಕುಮವನ್ನು ಹಂಚಿಕೊಂಡು ಶುಭಹಾರೈಸಿಕೊಂಡರು. ಸಂಘದ ಸದಸ್ಯರಿಂದ ಭಜನೆ ಸಂಕೀರ್ತನೆಯನ್ನು ಆಯೋಜಿಸಲಾಗಿತ್ತು.



