ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಕಲಾವಿದರ ವೇದಿಕೆ(ರಿ.) ಬೆಂಗಳೂರು, ಸಮಾಜ ಕಲ್ಯಾಣ ಸಂಸ್ಥೆ (ರಿ.) ಬೆಂಗಳೂರು ಹಾಗೂ ಮುರಸಿದ್ಧೇಶ್ವರ ಸಂಯುಕ್ತ ಆಶ್ರಯದಲ್ಲಿ ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಲಾ ಪ್ರತಿಭೋತ್ಸವ ೨೦೧೯ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯಕ್ಷಗಾನ, ಭರತನಾಟ್ಯ, ನಾಟಕ, ಭಾಷಣ ಸ್ಪರ್ಧೆ ಮುಂತಾದ ಕ್ಷೇತ್ರದಲ್ಲಿ ಸಾಧನೆಗೈದ ನಾಟ್ಯಲಹರಿ ನೃತ್ಯ ತಂಡದ ಬಾಲ ಪ್ರತಿಭೆ ಅನ್ನಪೂರ್ಣ ಅವರಿಗೆ `ಸಿರಿಗನ್ನಡ ರಾಷ್ಟ್ರೀಯ ನೃತ್ಯ ಕಲಾ ರತ್ನ’ ಎಂಬ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾಹಿತಿ ಎಂ ಆರ್ ನದಾಫ್, ಕಲಾವಿದರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ವಾಘಮೋಡಿ, ಶರಣಯ್ಯ ಜೆಡಿಮಠ, ಕರ್ನಾಟಕ ಜನಸ್ಪಂದನ ಟ್ರಸ್ಟ್ ರಾಜ್ಯಾಧ್ಯಕ್ಷ ಹಣಮಂತಪ್ಪ ಮೇಡೆಗಾರ ,ಯುವ ಮುಖಂಡರಾದ ನಿಖಿಲ್ ಶಂಕರ್ ,ಅಖಿಲ ಕರ್ನಾಟಕ ಮಹಿಳಾ ಘರ್ಜನೆ ರಾಜ್ಯಾಧ್ಯಕ್ಷೆ ಮಂಜುಳಾ ,ಲತಾ ಸಿ ,ಜ್ಯೋತಿ ಶ್ರೀನಿವಾಸ್ ,ಕೆ ಬಸವಣ್ಣಗೌಡ , ಅಂಬುಜಾಕ್ಷಿ ಬಿ ಪಿ ಇತರ ಸಂಘ ಸಂಸ್ಥೆಯ ಗಣ್ಯರು ಮತ್ತು ಪ್ರಶಸ್ತಿ ಪುರಸ್ಕೃತರು ಇದ್ದರು. ಅನ್ನಪೂರ್ಣ ಅವರು ವಗ್ಗ ಸಮೀಪದ ಉಗ್ಗಬೆಟ್ಟು ನಿವಾಸಿ ಜಯಂತ್ ಬಂಗೇರ ಮತ್ತು ಯಶೋದಾ ದಂಪತಿಯ ಸುಪುತ್ರಿ.



